

ಕೋಲಾರ: ರೈತರು, ಮಹಿಳೆಯರಿಗೆ ಸಾಲ ನೀಡಿಕೆ, ಸಾಲ ವಸೂಲಾತಿ ಹಾಗೂ ಪ್ಯಾಕ್ಸ್‌ಗಳ ಗಣಕೀಕರಣ ಕಾರ್ಯವನ್ನು ಯಶಸ್ವಿಗೊಳಿಸಲು ಶ್ರಮಿಸಿರುವ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಂದಿನ ದಿನಗಳಲ್ಲಿ ಠೇವಣಿ ಸಂಗ್ರಹಣೆಯಲ್ಲಿ ದಾಖಲೆ ನಿರ್ಮಿಸುವ ಮೂಲಕ ಬ್ಯಾಂಕಿನ ಕೀರ್ತಿ ಹೆಚ್ಚಿಸಬೇಕೆಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ನಗರದ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಡಿಸಿಸಿ ಬ್ಯಾಂಕ್ ಶಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಾತನಾಡಿ, ಠೇವಣಿ ಸಂಗ್ರಹಣೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಬೇಕಿದೆ, ಬ್ಯಾಂಕಿನಲ್ಲಿ ಹಣವಿಲ್ಲದೆ ಕನಸಿನ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ ಎಂದರು.
ಬ್ಯಾಂಕ್ ಸಿಬ್ಬಂದಿ ತಲಾ 15 ಲಕ್ಷ ರೂ. ಠೇವಣಿ ಸಂಗ್ರಹಿಸಬೇಕೆಂದು ಸೂಚಿಸಿದ ಅವರು, ಇದರಲ್ಲಿ ಸಫಲರಾಗುವವರಿಗೆ ಗೌರವ ಪುರಸ್ಕಾರ ನೀಡುವುದಾಗಿ ೋಷಣೆ ವಾಡಿದರು. ಬ್ಯಾಂಕ್ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ಪ್ರತಿ ಶಾಖೆಯಿಂದ ತಿಂಗಳಿಗೆ 2 ಕೋಟಿ ರೂಪಾಯಿ ಠೇವಣಿ ಸಂಗ್ರಹ ವಾಡಿದಲ್ಲಿ ಸಾಲಕ್ಕಾಗಿ ಎದುರು ನೋಡುತ್ತಿರುವ ಅರ್ಜಿದಾರರ ಬೇಡಿಕೆ ಪೂರೈಸಬಹುದು ಎಂದರು.
ಅಪೆಕ್ಸ್ ಬ್ಯಾಂಕಿನ ಅಧಿಕಾರಿಗಳು ಡಿಸಿಸಿ ಬ್ಯಾಂಕಿನ ಸಾಧನೆ ಗುರುತಿಸಿ 1.5 ಕೋಟಿ ರೂ. ವಿಶೇಷ ಅನುದಾನ ನೀಡಿದ್ದಾರೆ. ಈ ಹಣವನ್ನು ಪ್ಯಾಕ್ಸ್‌ಗಳ ಗಣಕೀಕರಣ ಹಾಗೂ ಅಗತ್ಯ ಸೌಲಭ್ಯಕ್ಕೆ ಬಳಕೆ ವಾಡಲಾಗುವುದು. ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕಿಗೆ ಮರ ಜೀವ ತುಂಬಲು ಪಟ್ಟಿರುವ ಕಷ್ಟಕ್ಕೆ ಪ್ರತಿಫಲ ಸಿಕ್ಕಿದೆ, ಪ್ಯಾಕ್ಸ್‌ಗಳ ಗಣಕೀಕರಣ ಹಾಗೂ ಗಣಕೀಕೃತ ಲೆಕ್ಕಪರಿಶೋಧನೆ ಸುಲಭದ ಕೆಲಸವಲ್ಲ, ಈ ಕಾರ್ಯವನ್ನು ದೇಶದಲ್ಲೇ ಮೊದಲ ಬಾರಿಗೆ ಕೋಲಾರ ಡಿಸಿಸಿ ಬ್ಯಾಂಕ್ ವಾಡಿ ತೋರಿಸಿದ್ದು, ಇದನ್ನು ಪರಿಗಣಿಸಿ ಅಪೆಕ್ಸ್ ವಿಶೇಷ ಅನುದಾನ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಬ್ಯಾಂಕ್ ಎಜಿಎಂಗಳಾದ ಖಲೀಮುಲ್ಲಾ, ಬೈರೇಗೌಡ, ಹುಸೇನ್ ದೊಡ್ಡಮುನಿ, ಅರುಣ್‌ಕುವಾರ್, ವ್ಯವಸ್ಥಾಪಕರಾದ ಭಾನುಪ್ರಕಾಶ್, ಪದ್ಮಮ್ಮ, ನವೀನ್, ವಿಸಾಫ್ಟ್ ಕಂಪನಿ ಸಿಬ್ಬಂದಿ ವಿಶ್ವ, ನಾಗೇಶ್, ಫರ್ನಾಂಡೀಸ್ ಉಪಸ್ಥಿತರಿದ್ದರು.
ಸಾಲ ವಸೂಲಾತಿಗೂ ಅದ್ಯತೆ ನೀಡಿ: ಬ್ಯಾಂಕಿನ ಎನ್‌ಪಿಎ ಕಡಿಮೆಯಾಗಿದೆ, ಇದು ಶೂನ್ಯಕ್ಕೆ ಬರಬೇಕು. ಬ್ಯಾಂಕಿನ ನತೆಗೆ ಚ್ಯುತಿಯಾಗದಂತೆ ಸಿಬ್ಬಂದಿ ಎಚ್ಚರವಹಿಸಿ, ಕೊಟ್ಟ ಸಾಲ ವಸೂಲಿ ವಾಡಬೇಕು. ದೇಶಕ್ಕೆ ನಂ.1 ಎಂಬ ಖ್ಯಾತಿಗೆ ಮಸಿ ತಾಗದಂತೆ ಜವಾಬ್ದಾರಿಯಿಂದ ಕೆಲಸ ವಾಡುವಂತೆ ಸೂಚಿಸಿದರಲ್ಲದೆ, ಸಾಲ ವಸೂಲಾತಿಯಲ್ಲಿ ಹಿಂದುಳಿದಿರುವ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.