ಟೊಮ್ಯಾಟೊ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಲಿ ; ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನವಿ

01 SDLP 03
Published on

ಶಿಡ್ಲಘಟ್ಟ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮ್ಯಾಟೊ ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿದ್ದು ಸರ್ಕಾರ ಕೂಡಲೇ ಟೊಮ್ಯಾಟೊ ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಆಗ್ರಹಿಸಿದರು.

ದಿಬ್ಬೂರಹಳ್ಳಿಯಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘ ಗುರುವಾರ ಆಯೋಜಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಟೊಮ್ಯಾಟೊ ಬೆಳೆ ರಸ್ತೆ ಪಾಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆಗಾರರನ್ನು ಕಡೆಗಣಿಸಿವೆೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಬೆಳೆಗಾರರಿಗೆ ಒಂದು ಎಕರೆಗೆ ಒಂದು ಲಕ್ಷ ಬೆಳೆ ನಷ್ಟ ಪರಿಹಾರ ಒದಗಿಸಿ ಬೆಂಬಲ ಬೆಲೆ ನೀಡಿ ಟೊಮ್ಯಾಟೊ ಖರೀದಿಸಬೇಕೆಂದು ಒತ್ತಾಯಿಸಿದರು. ಒಂದು ಕಡೆ ಕರೊನಾ ಸಂಕಷ್ಟ, ಮತ್ತೊಂದೆಡೆ ದರ ಕುಸಿತದಿಂದ ಕಂಗಾಲಾಗಿದ್ದು ಅವಳಿ ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದರು.

ಚಿಂತಾಮಣಿ ಡಿಸಿಸಿ ಬ್ಯಾಂಕಿನ ನಿರ್ದೇಶಕ ನಾಗರೆಡ್ಡಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ದಿಬ್ಬೂರಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಡಿಎಸ್‌ಎನ್ ರಾಜು, ಉಪಾಧ್ಯಕ್ಷ ಬಿಜಿ ಗಣೇಶ್, ನಿರ್ದೇಶಕರಾದ ತಿಮ್ಮಪ್ಪ, ವೆಂಕಟರೋಣಪ್ಪ, ಶಂಕರನಾರಾಯಣರೆಡ್ಡಿ, ಆಂಜನೇಯರೆಡ್ಡಿ, ಬಿಜೆ ಪ್ರಕಾಶ್, ಸೀತಾರಾಮರೆಡ್ಡಿ, ಡಿ.ಎನ್.ವೇಣುಗೋಪಾಲ್, ಬಿ.ಜಿ.ಆಂಜಿನಪ್ಪ, ಪ್ರಸನ್ನ, ಸಿಇಒ ರಾಮಾಂಜಿನಪ್ಪ, ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net