ಮನೆ ಬಾಗಿಲಲ್ಲೇ ಡಿಸಿಸಿ ಸಾಲ ಸೌಲಭ್ಯ ; ಬ್ಯಾಂಕ್ ನಿರ್ದೇಶಕ ವೆಂಕಟಶಿವಾರೆಡ್ಡಿ ಹೇಳಿಕೆ

24 bgp dcc bank news photo
Published on

ಬಾಗೇಪಲ್ಲಿ : ಗ್ರಾಮೀಣ ಪ್ರದೇಶದಲ್ಲಿ ಶೂನ್ಯ ಬಡ್ಡಿ ಸಾಲ ಯೋಜನೆ ಕಲ್ಪಿಸುವ ಉದ್ದೇಶಕ್ಕಾಗಿ ಸಂಚಾರಿ ಎಟಿಎಂ ವಾಹನ ಲೋಕಾರ್ಪಣೆ ಮಾಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ ತಿಳಿಸಿದರು.

ತಾಲೂಕಿನ ದೇವರಗುಡಿಪಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯ 85 ಸ್ತ್ರೀ ಶಕ್ತಿ ಸಂಘಗಳಿಗೆ 4 ಕೋಟಿ ರೂ. ಸಾಲದ ಚೆಕ್‌ಗಳನ್ನು ಗುರುವಾರ ವಿತರಿಸಿ, ರೈತರಿಗೆ ಸಾಲ ಸೌಲಭ್ಯ ನೀಡಲು ರಾಷ್ಟ್ರೀಕೃತ ಬ್ಯಾಂಕ್‌ಗಳೇ ಹಿಂದೇಟು ಹಾಕುತ್ತಿವೆ, ಇಂತಹ ಸಂಕಷ್ಠ ಸಮಯದಲ್ಲಿ ಡಿಸಿಸಿ ಬ್ಯಾಂಕ್ ಕೋಟ್ಯಾಂತರ ರೂ. ಸಾಲ ನೀಡಿ ಹಣವನ್ನು ರೈತರ ಮನೆ ಬಾಗಿಲುಗೆ ತಲುಪಿಸುತ್ತಿದೆ ಎಂದರು.

ಸಾಲದ ಹಣ ಪಡೆಯಲು ಬ್ಯಾಂಕ್ ಅಥವಾ ಶಾಖಾ ಕಚೇರಿಗೆ ಅಲೆದಾಟವನ್ನು ತಪ್ಪಿಸುವ ಉದ್ದೇಶದಿಂದ ಸಂಚಾರಿ ಎಟಿಎಂ ವಾಹನ ಲೋಕರ್ಪಾಣೆ ಮಾಡಲಾಗಿದೆ, ಸದಸ್ಯರು ಬ್ಯಾಂಕ್‌ನಿಂದ ನೀಡಿರುವ ಎಟಿಎಂ ಕಾರ್ಡ್ ಬಳಸಿ ಬ್ಯಾಂಕ್ ಖಾತೆಯಲ್ಲಿರುವ ಸಾಲದ ಹಣ ಡ್ರಾ ಮಾಡಿಕೊಳ್ಳಬಹುದು ಎಂದರು.

ಸ್ತ್ರೀಶಕ್ತಿ ಸಂಘಗಳ ಮಹಿಳೆಯರಿಗೆ ಸಹಕಾರ ಸಂಘದಿಂದ ನೀಡುತ್ತಿರುವ 5 ಲಕ್ಷ ರೂ. ಸಾಲಕ್ಕೆ ಯಾವುದೇ ರೀತಿಯ ಬಡ್ಡಿ ಇರುವುದಿಲ್ಲ, ಅಸಲು ಬ್ಯಾಂಕ್‌ಗೆ ಸಕಾಲಕ್ಕೆ ಮರುಪಾತಿಸುವುದರೊಂದಿಗೆ ಇತರರಿಗೂ ಸೌಲಭ್ಯ ದೊರೆಯಲು ಸಹಕರಿಸಬೇಕು ಎಂದು ಮನವಿ ಮಾಡಿದರು. ದೇವರಗುಡಿಪಲ್ಲಿ ವಿಎಸ್‌ಎಸ್‌ಎನ್ ನಿರ್ದೇಶಕರಾದ ಡಿ.ಎಸ್.ಜಯರಾಂ, ಅಂಜಿನರೆಡ್ಡಿ, ಚಂದ್ರಶೇಖರರೆಡ್ಡಿ, ಸುಭಾನ್, ರಾಮಲಕ್ಷ್ಮಮ್ಮ, ಗಂಗಾಧರಪ್ಪ, ಸಿಇಒ ಸಿ.ವೆಂಕಟರವಣಪ್ಪ, ಸಿಬ್ಬಂದಿ ಬೈಪರೆಡ್ಡಿ, ಪ್ರಭಾಕರರೆಡ್ಡಿ, ಗಂಗಿರೆಡ್ಡಿ ಮತ್ತಿತರರು ಇದ್ದರು.

24 ಬಿಜಿಪಿ ಡಿಸಿಸಿ ಬ್ಯಾಂಕ್ ನ್ಯೂಸ್ ಪೋಟೊ

ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ವಿಎಸ್‌ಎಸ್‌ಎನ್ ಕಚೇರಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲದ ಚೆಕ್ ವಿತರಿಸಿದರು. ಬ್ಯಾಂಕ್ ವ್ಯವಸ್ಥಾಪಕ ಸಿ.ಎನ್.ಚೇತನ್, ವಿಎಸ್‌ಎಸ್‌ಎನ್ ನಿರ್ದೇಶಕರಾದ ಎಲ್‌ಐಸಿ ವೆಂಕಟರವಣಪ್ಪ, ಜಿ.ಎಂ.ರಾಮಕ್ರಷ್ಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net