ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ; ಶಾಸಕ ಕೆ.ವೈ.ನಂಜೇಗೌಡ ಅಭಿಮತ

15 LKR PH 1
Published on

ಲಕ್ಕೂರು: ರೈತರು, ಮಹಿಳೆಯರ ಆರ್ಥಿಕ ಪ್ರಗತಿಗೆ ಡಿಸಿಸಿ ಬ್ಯಾಂಕ್​ನಿಂದ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ವಿತರಿಸುತ್ತಿದ್ದು ಯೋಜನೆಯನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳುವಂತೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಜಯಮಂಗಲ ಗ್ರಾಮದ ಕೃಷಿ ಪತ್ತಿನ ಸೇವಾ ಸಹಕಾರ ಸಂದ ಆವರಣದಲ್ಲಿ ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ ಸಹಯೋಗದಲ್ಲಿ ಮಂಗಳವಾರ 14 ಮಹಿಳಾ ಸ್ವ&ಸಹಾಯ ಸಂಗಳಿಗೆ ಶೂನ್ಯ ಬಡ್ಡಿ ದರದಲ್ಲಿ 60.26 ಲಕ್ಷ ರೂಪಾಯಿ ಸಾಲದ ಚೆಕ್​ ವಿತರಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಸಮರ್ಪಕ ಮಳೆಯಿಲ್ಲದೆ ಹೈನುಗಾರಿಕೆಯನ್ನೇ ನಂಬಿಕೊಂಡಿದ್ದು, ಮಹಿಳೆಯರು ಹಾಗೂ ರೈತರು ಆರ್ಥಿಕವಾಗಿ ಪ್ರಗತಿ ಹೊಂದಬೇಕೆಂಬ ಉದ್ದೇಶದಿಂದ ಡಿಸಿಸಿ ಬ್ಯಾಂಕ್​ ಕಾರ್ಯನಿರ್ವಹಿಸುತ್ತಿದೆ. ಫಲಾನುಭವಿಗಳು ಸಾಲ ಪಡೆದು ಆರ್ಥಿಕವಾಗಿ ಮುಂದೆ ಬರಬೇಕು ಎಂದರು.

ರೈತರಿಗೆ 3 ಲಕ್ಷ ರೂ., 10 ಮಹಿಳೆಯರ ಗುಂಪಿಗೆ 5 ಲಕ್ಷ ರೂಪಾಯಿವರೆಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ತಾಲೂಕಿನಲ್ಲಿ 14 ಕೃಷಿ ಪತ್ತಿನ ಸೇವಾ ಸಹಕಾರ ಸಂಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಸಂಗಳಿಗೂ ಹೆಚ್ಚಿನ ಸಾಲ ನೀಡಲಾಗಿದೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಪ್ರಭಾರ ಅಧ್ಯಕ್ಷ ಎಸ್​.ನಾರಾಯಣಸ್ವಾಮಿ, ಸದಸ್ಯರಾದ ಗುರುಮೂರ್ತಿರೆಡ್ಡಿ, ಎನ್.ಶ್ರೀನಿವಾಸಯ್ಯ, ವಿ.ನಾರಾಯಣಸ್ವಾಮಿ, ಎ.ನಾಗರಾಜ್​, ಮುನಿಯಲ್ಲಪ್ಪ, ಕೆ.ಆರ್​.ಚಂದ್ರಶೇಖರ್​, ವಿ.ನಾಗೇಶ್​, ಮುಖಂಡರಾದ ಎಂ.ಆಂಜಿನಪ್ಪ, ಕೃಷ್ಣಾರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net