ಡಿಸಿಸಿ ಬ್ಯಾಂಕ್​ ಚುಕ್ಕಾಣಿ ನಮ್ಮದೇ

8gkk1
Published on

ಗೋಕಾಕ: ಭಗವಂತ ಮತ್ತು ಸಹಕಾರ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕ್​ನ ಆಡಳಿತ ಚುಕ್ಕಾಣಿಯನ್ನು ಈ ಬಾರಿ ನಮ್ಮ ಬಣವೇ ಹಿಡಿಯಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಬಸವೇಶ್ವರ ಸಭಾಭವನದಲ್ಲಿ ಡಿಸಿಸಿ ಬ್ಯಾಂಕ್​ ಚುನಾವಣೆ ಪ್ರಚಾರಾರ್ಥ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಇತರೆ ಸಹಕಾರ ಸಂಗಳ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕಿನ ಸರ್ವ ಸಾಧಾರಣ ಸಭೆಯಲ್ಲಿ ಷೇರುದಾರರ ಅನುಮತಿ ಪಡೆಯದೇ, ಆಡಳಿತ ಮಂಡಳಿ ಗಮನಕ್ಕೂ ತರದೇ ಅಧ್ಯರೊಬ್ಬರೇ ಏಕಪಕ್ಷೀಯ ನಿರ್ಧಾರ ಕೆಗೊಂಡಿದ್ದೇ ಹಿಂದಿನ ಅಧ್ಯಕ್ಷರ ವಿರುದ್ಧ ತಿರುಗಿ ಬೀಳಲು ಕಾರಣ ಎಂದು ಮಾಜಿ ಸಂಸದ ರಮೇಶ ಕತ್ತಿ ಅವರೊಂದಿಗಿನ ಮನಸ್ತಾಪದ ಕಾರಣವನ್ನು ಬಹಿರಂಗ ಪಡಿಸಿದರು.

ಜಿಲ್ಲೆಯ 853 ಸಹಕಾರ ಸಂಗಳ ಪೆಕಿ ಸುಮಾರು 577 ಸಹಕಾರ ಸಂಗಳ ಸದಸ್ಯರು ಇಂದಿನ ಸಭೆಯಲ್ಲಿ ಹಾಜರಾಗಿ ನಾವು ಕೆಗೊಳ್ಳುವ ನಿರ್ಧಾರಕ್ಕೆ ಬದ್ಧರಿರುವುದಾಗಿ ತಿಳಿಸಿದ್ದಾರೆ. ಅಕ್ಟೋಬರ್​ ತಿಂಗಳಲ್ಲಿ ಜರುಗಲಿರುವ ಈ ಚುನಾವಣೆಯಲ್ಲಿ 16 ಸ್ಥಾನಗಳ ಪೆಕಿ 12 ಸ್ಥಾನಗಳಲ್ಲಿ ನಮ್ಮ ಬಣ ಗೆಲ್ಲಲಿದೆ ಎಂದರು.

ಬಿಡಿಸಿಸಿ ಬ್ಯಾಂಕ್​ ಉಪಾಧ್ಯ ಸುಭಾಸ್​ ಢವಳೇಶ್ವರ, ಬುಡಾ ಅಧ್ಯ ಲಕ್ಷ$್ಮಣರಾವ್​ ಚಿಂಗಳೆ, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕರಾದ ನೀಲಕಂಠ ಕಪ್ಪಲಗುದ್ದಿ, ಪಂಚನಗೌಡ ದ್ಯಾಮನಗೌಡರ, ಕಷ್ಣಾ ಅನಗೋಳಕರ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಸದೆಪ್ಪ ವಾರಿ, ರಮೇಶ ಅಣ್ಣಿಗೇರಿ, ಪ್ರಕಾಶ ಅಂಬೋಜಿ, ಶಂಕರ ಇಟ್ನಾಳ, ಬಾಬು ವಾಗ್ಮೋರೆ, ಸದಾಶಿವ ಶಿಂತ್ರೆ, ವಿರೂಪಾಕ್ಷ ಈಟಿ, ಮಹಾದೇವ ಬಿಳಿಕುರಿ, ಗೋಕಾಕ ಟಿಎಪಿಸಿಎಂಎಸ್​ ಅಧ್ಯ ಅಶೋಕ ನಾಯಿಕ, ಸಹಕಾರ ಸಂಗಳ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net