ಡಿಸಿಸಿ ಬ್ಯಾಂಕ್ ಅನ್ನುವುದು ತಾಯಿ ಬೇರಿದ್ದಂತೆ

tlk 18-1
ತಾಳಿಕೋಟೆ ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ತಾಳಿಕೋಟೆ ಶಾಖೆ ವತಿಯಿಂದ ನಡೆದ ಗ್ರಾಹಕರ ಸಭೆಯಲ್ಲಿ ಬಿ.ಎಸ್. ಪಾಟೀಲ(ಯಾಳಗಿ) ಮಾತನಾಡಿದರು. ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಆರ್.ಜಿ. ಹಿರೂರ, ಕ್ಷೇತ್ರಾಧಿಕಾರಿ ಎಸ್.ಬಿ. ಬಿರಾದಾರ ಇತರರಿದ್ದರು.
Published on

ತಾಳಿಕೋಟೆ: ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತಾಳಿಕೋಟೆ ಶಾಖೆಯಲ್ಲೂ ಈ ಹಿಂದಿನಿಂದಲೂ ರೈತರಿಗೆ ಅನುಕೂಲ ಕಲ್ಪಿಸುತ್ತ ಸಾಗಿಬಂದಿದ್ದಲ್ಲದೆ, ಎಲ್ಲ ಗ್ರಾಹಕರ ಪ್ರೀತಿಗೂ ಪಾತ್ರವಾಗಿದೆ ಎಂದು ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್. ಪಾಟೀಲ(ಯಾಳಗಿ)ಹೇಳಿದರು.

ಡಿಸಿಸಿ ಬ್ಯಾಂಕ್ ತಾಳಿಕೋಟೆ ಶಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ರೈತರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಈ ಹಿಂದಿನಿಂದಲೂ ಸಹಾಯ ಹಸ್ತ ಕಲ್ಪಿಸುತ್ತಾ ಸಾಗಿಬಂದಿವೆ. ಗ್ರಾಹಕರು ಪಡೆದ ಸಾಲದ ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಲದೆ, ಸಕಾಲಕ್ಕೆ ಮರು ಪಾವತಿಸುವುದೂ ಅತ್ಯಗತ್ಯವಾಗಿದೆ. ಸಾಲಕ್ಕೆ ಸಂಬಂಧಿತ ಬಡ್ಡಿಯನ್ನಾದರೂ ತುಂಬಿ ಸಾಲದ ಜೀರ್ಣೋದ್ಧಾರತೆಯಲ್ಲಿ ಮುಂದುವರಿಯಬೇಕು ಎಂದರು. ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಆರ್.ಜಿ. ಹಿರೂರ ಮಾತನಾಡಿ, ತಾಳಿಕೋಟೆ ಶಾಖೆಗೆ ಸಂಬಂಧಿತ ಅಂದಾಜು 8 ಪಿಕೆಪಿಎಸ್ ಬ್ಯಾಂಕುಗಳು ಇದ್ದು ಅವುಗಳಲ್ಲಿ ತಾಳಿಕೋಟೆ, ನಾವದಗಿ, ಗುಂಡಕನಾಳ, ಬೊಮ್ಮನಹಳ್ಳಿ, ತುಂಬಗಿ, ಸಾಲವಾಡಗಿ, ಹರನಾಳ, ಭಂಟನೂರ ಒಳಗೊಂಡಿವೆ ಎಂದರು.

ಕ್ಷೇತ್ರಾಧಿಕಾರಿ ಎಸ್.ಬಿ. ಬಿರಾದಾರ ಮಾತನಾಡಿದರು.

ತಾಳಿಕೋಟೆ ಪಿಕೆಪಿಎಸ್ ಅಧ್ಯಕ್ಷರಾದ ಗುರಸಂಗಪ್ಪ ಕಶೆಟ್ಟಿ, ಭಂಟನೂರ ಪಿಕೆಪಿಎಸ್ ಮಾಜಿ ಅಧ್ಯಕ್ಷ ಹಣಮಗೌಡ ಬಸರಡ್ಡಿ, ಗ್ರಾಹಕರಾದ ಚೊಕ್ಕಾವಿಯ ಸಾಹೇಬಗೌಡ ಕರಿಗೌಡರ, ಗೊಟಗುಣಕಿಯ ಬಸನಗೌಡ ಪಾಟೀಲ, ಎಸ್.ಎಸ್. ಹೆಗರಡ್ಡಿ, ಕಾಶಿರಾಯಗೌಡ ಕೋನ್ಯಾಳ, ಬಸನಗೌಡ ಬಿರಾದಾರ, ರಾಮನಗೌಡ ಹೆಮ್ಮಡಗಿ, ನಿಂಗಣ್ಣ ಚಳ್ಳಗಿ, ಸಂಗನಗೌಡ ಪಾಟೀಲ, ಎಂ.ಎಸ್. ಬಸರಡ್ಡಿ, ಶಶಿಕುಮಾರ ಪಾಟೀಲ, ಬಸವಂತ್ರಾಯ ಚೌದ್ರಿ, ಹಣಮಗೌಡ ಬಿರಾದಾರ, ಶ್ರೀದೇವಿ ಬಡಿಗೇರ, ಸಾವಿತ್ರಿ ಹೂಗಾರ, ಪುಷ್ಪಾವತಿ ಬಡಿಗೇರ ಇತರರಿದ್ದರು.

ಎಸ್.ಬಿ. ರಾಮಗಿರಿಮಠ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net