ಡಿಸಿಸಿ ಬ್ಯಾಂಕ್​ ಚುನಾವಣೆ ಪಕ್ಷಾತೀತ

10kittur1
Published on

ಚನ್ನಮ್ಮ ಕಿತ್ತೂರು: ಡಿಸಿಸಿ ಬ್ಯಾಂಕ್​ ಚುನಾವಣೆ ಯಾವುದೇ ರೀತಿ ರಾಜಕೀಯ ಅಲ್ಲ, ಪಕ್ಷಾತೀತವಾದದು. ಶಾಸಕ ಬಾಬಾಸಾಹೇಬ ಪಾಟೀಲರನ್ನು ಗೆಲ್ಲಿಸಿ ಅಭಿವೃದ್ಧಿಗೆ ನಾಂದಿ ಹಾಡಿದ್ದೀರಿ. ಹೀಗಾಗಿ, ಪಿಕೆಪಿಎಸ್​ ಗೆಲುವು ರೈತರ ಅಭಿವೃದ್ಧಿಗೆ ಆಶಾಕಿರಣವಾಗಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಶ್ರೀ ಚನ್ನಬಸಪ್ಪ ಮಾರಿಹಾಳ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಗಳ ಅಧ್ಯರು, ಉಪಾಧ್ಯರು, ಆಡಳಿತ ಮಂಡಳಿ ಸದಸ್ಯರು ಹಾಗೂ ಕಾರ್ಯದರ್ಶಿಗಳ ಸೌಹಾರ್ದ ಸಭೆಯಲ್ಲಿ ಮಾತನಾಡಿದರು.

ಡಿಸಿಸಿ ಬ್ಯಾಂಕ್​ ನಿರ್ದೇಶಕ ಸ್ಥಾನಕ್ಕೆ ಎಲ್ಲರ ಬಹುಮತದಿಂದ ಚನ್ನಮ್ಮನ ಕಿತ್ತೂರು ೇತ್ರದ ಅಭ್ಯರ್ಥಿಯಾಗಿ ನಾನಾಸಾಹೇಬ ಪಾಟೀಲರನ್ನು ಆಯ್ಕೆ ಮಾಡಲಾಗಿದೆ. ಎಲ್ಲರೂ ಒಗ್ಗೂಡಿ ಬೆಂಬಲಿಸಬೇಕು. ಆಡಳಿತ ಪಕ್ಷವಿರುವುದರಿಂದ ಹೆಚ್ಚಿನ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.

ಈಗಾಗಲೇ ಚನ್ನಮ್ಮನ ಕಿತ್ತೂರು ಕ್ಷೇತ್ರಕ್ಕೆ ಶಾಸಕ ಬಾಬಾಸಾಹೇಬ ಪಾಟೀಲ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದಲೂ ಅನುದಾನ ನೀಡಿದ್ದೇನೆ. ಕಿತ್ತೂರು ಮಾದರಿ ನಾಡಗಿಸುವುದೇ ನನ್ನ ಮಹಾದಾಸೆಯಾಗಿದೆ ಎಂದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಸಹಕಾರಿ ಸಂ ವಿವಿಧ ಸಮಸ್ಯೆ ಅನುಭವಿಸುತ್ತಿದ್ದು, ಅವುಗಳ ಅಭಿವೃದ್ಧಿ ಕೆಲಸವಾಗಬೇಕಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವೆ ಅಗತ್ಯವಾಗಿದೆ. ಜತೆಗೆ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಈ ಚುನಾವಣೆಯಲ್ಲಿ ನಾನಾಸಾಹೇಬ ಪಾಟೀಲರನ್ನು ಗೆಲ್ಲಿಸುವ ಮೂಲಕ ಮತ್ತಷ್ಟು ಬಲ ನೀಡಬೇಕು ಎಂದು ಮನವಿ ಮಾಡಿದರು.

ಕಿತ್ತೂರು ಕ್ಷೇತ್ರದ ಚುನಾವಣೆ ಸ್ಪರ್ಧಿ ನಾನಾಸಾಹೇಬ ಪಾಟೀಲ ಮಾತನಾಡಿ, ನಿಮ್ಮೆಲ್ಲರ ಬಹುಮತದಿಂದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದು, ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ ಎಂದರು. ಕಾಂಗ್ರೆಸ್​ ಬ್ಲಾಕ್​ ಅಧ್ಯ ಸಂಗನಗೌಡ ಪಾಟೀಲ, ಪಂಪಂ ಅಧ್ಯ ಜೈಸಿದ್ದರಾಮ ಮರಿಹಾಳ, ಅಶೋಕ ಯರಗುಪ್ಪಿ, ಶಂಕರ ಹೊಳಿ, ವಿರೂಪಾ ಮರಿಹಾಳ, ಎಂ.ಎ್​. ಜಕಾತಿ, ಸಾವಂತ ಕಿರಬಣ್ಣವರ, ಹನ್​ೀ ಸುತಗಟ್ಟಿ, ರಾಜೇಂದ್ರ ಇನಾಮದಾರ, ಶಿವನಗೌಡ ಪಾಟೀಲ, ನಾಗಪ್ಪ ಮಣ್ಣಿಕೇರಿ, ಮುದುಕಪ್ಪ ಮರಡಿ, ಅನಿಲ ಯಮ್ಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net