ಡಿಸಿಸಿ ಬ್ಯಾಂಕ್​ ಚುನಾವಣಾ ವೇಳಾಪಟ್ಟಿ ಪ್ರಕಟ

dcc bank
Published on

ಕೋಲಾರ: ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ (ಡಿಸಿಸಿ) ಚುನಾವಣಾ ವೇಳಾಪಟ್ಟಿಯನ್ನು ಸೋಮವಾರ ಚುನಾವಣಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಡಾ.ಮೈತ್ರಿ ಎಚ್​.ಪಿ.ಎಸ್​ ಅವರು ಪ್ರಕಟಿಸಿದ್ದಾರೆ.

ಬ್ಯಾಂಕಿನ ಒಟ್ಟು 18 ನಿರ್ದೇಶಕ ಸ್ಥಾನಗಳಿಗೆ ಮೇ 28ರಂದು ಮತದಾನ ಹಾಗೂ ಅದೇ ದಿನ ಮತ ಎಣಿಕೆ ನಡೆಯಲಿದೆ. ಮೇ 18 ರಿಂದ 20ರವರೆಗೆ ನಾಮಪತ್ರ ಸಲ್ಲಿಕೆ, ಮೇ 23 ನಾಮಪತ್ರ ವಾಪಸ್​ ಪಡೆಯಬಹುದಾಗಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 14 ತಾಲೂಕುಗಳಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಗಳಿಂದ&14 ನಿರ್ದೇಶಕರು, ಬ್ಯಾಂಕಿನ ಕಾರ್ಯವ್ಯಾಪ್ತಿಗೆ ಬರುವ ಎರಡೂ ಜಿಲ್ಲೆಯ ಎಲ್ಲ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಗಳಿಂದ ಚುನಾಯಿಸಲ್ಪಡುವ ಒಬ್ಬರು ನಿರ್ದೇಶಕರು, ಆಯಾ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಗಳಿಂದ ಚುನಾಯಿಸಲ್ಪಡುವ (ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಗಳನ್ನು ಒಳಗೊಂಡಂತೆ) ಇಬ್ಬರು ನಿರ್ದೇಶಕರು ಹಾಗೂ ಬ್ಯಾಂಕಿನ ಕಾರ್ಯವ್ಯಾಪ್ತಿಗೆ ಬರುವ ಇನ್ನಿತರೆ ಸಹಕಾರ ಸಂಗಳಿಂದ ಒಬ್ಬರು ನಿರ್ದೇಶಕರನ್ನು ಚುನಾಯಿಸಲು ಚುನಾವಣಾ ವೇಳಾಪಟ್ಟಿ ಹೊರಡಿಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net