ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಮೇಶ ಕತ್ತಿ ವಿರುದ್ಧ ಸ್ಪರ್ಧೆ

2HUK1
Published on

ಹುಕ್ಕೇರಿ: ತಾಲೂಕಿನ ಜನ ಬದಲಾವಣೆ ಬಯಸಿದ್ದು, 25 ವರ್ಷಗಳಿಂದ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗುತ್ತಿತ್ತು. ಈ ಬಾರಿ ರಮೇಶ ಕತ್ತಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಮಕನಮರಡಿ ಕ್ಷೇತ್ರದ ಅಲದಾಳ ಅತಿಥಿಗೃಹದಲ್ಲಿ ನಡೆದ ತಾಲೂಕಿನ 90ರಲ್ಲಿ 58 ಪಿಕೆಪಿಎಸ್‌ನವರು ನನಗೆ ಬೆಂಬಲ ವ್ಯಕ್ತಪಡಿಸಿದ್ದು, ಅವರ ಪ್ರೋತ್ಸಾಹವೇ ಸ್ಪರ್ಧೆಗೆ ಶ್ರೀರಕ್ಷೆ ಎಂದರು.

ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಗೆ 20 ಕೋಟಿ ರೂ. ಸಾಲ ಅವಶ್ಯವಿದ್ದಾಗ ರಮೇಶ ಕತ್ತಿ ಸಹಕಾರ ನೀಡಲಿಲ್ಲ. ನನಗೆ ಸಹಕರಿಸಿದ ಅಣ್ಣಾಸಾಹೇಬ ಜೊಲ್ಲೆ ಮತ್ತು ಜಾರಕಿಹೊಳಿ ಸಹೋದರರ ಪರವಾಗಿ ಸ್ಪರ್ಧಿಸುತ್ತಿದ್ದೇನೆ ಎಂದರು.

ಮಾಜಿ ಸಚಿವ ಶಶಿಕಾಂತ ನಾಯಿಕ, ಗುರು ಪಾಟೀಲ, ರಿಷಬ್ ಪಾಟೀಲ, ರವಿ ಕರಾಳೆ, ಅಮರ ನಲವಡೆ, ಸಂಜಯ ಶಿರಕೋಳಿ, ಬಂಡು ಹತನೂರೆ, ಭೀಮಣ್ಣ ರಾಮಗೋನಟ್ಟಿ, ಕಿರಣ ರಜಪೂತ, ರಾಜು ಸಿದ್ನಾಳ, ವಿರೂಪಾಕ್ಷಿ ಮರೆನ್ನವರ, ಬಸಗೌಡ ಪಾಟೀಲ, ಮಾರುತಿ ಪವಾರ, ತಮ್ಮಣ್ಣಗೌಡ ಪಾಟೀಲ, ಇಮ್ರಾನ್ ಮೋಮಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net