ಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ಸ್ಪರ್ಧೆ ಖಚಿತ

mbl
Published on

ಮುಳಬಾಗಿಲು: ಡಿಸಿಸಿ ಬ್ಯಾಂಕ್​ ನಿರ್ದೇಶಕರ ಚುನಾವಣೆಯಲ್ಲಿ ಟಿಎಪಿಸಿಎಂಎಸ್​ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಮುಳಬಾಗಿಲು ಟಿಎಪಿಸಿಎಂಎಸ್​ ಅಧ್ಯಕ್ಷರೂ ಆದ ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್​ ಹೇಳಿದರು.

ತಾಲೂಕಿನ ಶ್ರೀಕ್ಷೇತ್ರ ಘಟ್ಟು ವೆಂಕಟರಮಣಸ್ವಾಮಿ ದೇವಾಲಯದ ಮುಂಭಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ 9 ಮತಗಳು ಇದ್ದು, ಕಾಂಗ್ರೆಸ್​ ವರಿಷ್ಠರು, ಎರಡು ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಮುಖಂಡರ ಸೂಚನೆ ಸಿಕ್ಕಿದೆ, ಮುಂದೆ ಡಿಸಿಸಿ ಬ್ಯಾಂಕ್​ ಅಧ್ಯಕ್ಷರಾಗುವುದು ನಂತರದಲ್ಲಿ ನೋಡೋಣ, ಸದ್ಯಕ್ಕೆ ನಿರ್ದೇಶಕರಾಗುವ ಕಡೆ ಗಮನಹರಿಸಲಾಗಿದೆ ಎಂದರು.

ರಾಜ್ಯ ಕಾಂಗ್ರೆಸ್​ ಸರ್ಕಾರದ ಈ ಅವಧಿಯಲ್ಲೇ ನಡೆಯುವ ಸಂಪುಟ ಪುನರ್​ ರಚನೆ ವೇಳೆ ನಾನು ಮಂತ್ರಿ ಆಗೋದು ಖಚಿತ. ನಮ್ಮ ಸಮುದಾಯದಲ್ಲಿ ದೇಶದಲ್ಲಿ ನಾನೊಬ್ಬನೇ ಶಾಸಕನಿದ್ದೇನೆ ನಮ್ಮ ಸಮುದಾಯದ ಪ್ರಾತಿನಿತ್ಯ ಕಾಂಗ್ರೆಸ್​ ಕಲ್ಪಿಸುವುದು ಖಚಿತ ಎಂದರು.

ಡಿಸಿಸಿ ಬ್ಯಾಂಕ್​ನ ವಿಎಸ್ಸೆಸ್ಸೆಎನ್​ ಕ್ಷೇತ್ರದಿಂದ ನಿರ್ದೇಶಕರಾಗಿ ಎರಡು ಬಾರಿ ಉತ್ತಮ ಸೇವೆ ಸಲ್ಲಿಸಿದ ದಿ. ಎಂ.ಸಿ. ನೀಲಕಂಠೇಗೌಡರು ಅಕಾಲಿಕವಾಗಿ ಮರಣ ಹೊಂದಿದ್ದು, ಕ್ಷೇತ್ರದಲ್ಲಿ ಅವರ ಸಹೋದರ ಎಂ.ಸಿ.ಸರ್ವಜ್ಞ ಗೌಡ ಅಭ್ಯರ್ಥಿಯಾಗಿದ್ದು, ಅವರ ಗೆಲುವು ಖಚಿತವಾಗಿದೆ. ಅದೇ ರೀತಿ ಕೋಮಲ್​ ನಿರ್ದೇಶಕ ಸ್ಥಾನದ ಪೂರ್ವ ಕ್ಷೇತ್ರಕ್ಕೆ ರಾಜೇಂದ್ರ ಹಳ್ಳಿ ಆರ್​.ಆರ್​. ರಾಜೇಂದ್ರ ಗೌಡ ಅಭ್ಯರ್ಥಿಯಾಗಿದ್ದಾರೆ. ಪಶ್ಚಿಮ ಕ್ಷೇತ್ರಕ್ಕೆ ಶೀಘ್ರದಲ್ಲೇ ಅಭ್ಯರ್ಥಿ ಘೋಷಣೆ ಮಾಡಲಾಗುವುದು. ಒಟ್ಟಾರೆಯಾಗಿ ಡಿಸಿಸಿ ಬ್ಯಾಂಕ್​ಗೆ ಮುಳಬಾಗಿಲು ಕ್ಷೇತ್ರದಿಂದ ಇಬ್ಬರು, ಕೋಮಲ್​ಗೂ ಇಬ್ಬರೂ ಕಾಂಗ್ರೆಸ್​ ನಿರ್ದೇಶಕರು ಆಯ್ಕೆಯಾದ ಖಚಿತ ಎಂದರು.

ಎಂಎಲ್ಸಿ ಎಂ.ಎಲ್​.ಅನಿಲ್​ ಕುಮಾರ್​, ಜೈವಿಕ ಇಂಧನ ಮಂಡಳಿ ರಾಜ್ಯ ಮಾಜಿ ಉಪಾಧ್ಯಕ್ಷ ಎಮ್ಮೆನತ್ತ ಜಿ.ರಾಮಲಿಂಗಾರೆಡ್ಡಿ, ಮುಳಬಾಗಿಲು ನಗರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಮಹಮ್ಮದ್​ ಅಮಾನುಲ್ಲಾ, ಅಭ್ಯರ್ಥಿಗಳಾದ ಆರ್​.ಆರ್​.ರಾಜೇಂದ್ರ ಗೌಡ, ಎಂ.ಸಿ.ಸರ್ವಜ್ಞ ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net