ಡಿಸಿಸಿ ಬ್ಯಾಂಕ್ ಚುನಾವಣೆ: ನಾಳೆ ಬೇಳೂರು ನಾಮಪತ್ರ

Beluru gopalakrishna
ಬೇಳೂರು ಗೋಪಾಲಕೃಷ್ಣ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ.
Published on

ಶಿವಮೊಗ್ಗ:ಡಿಸಿಸಿ (ಜಿಲ್ಲಾ ಸಹಕಾರ ಕೇಂದ್ರ) ಬ್ಯಾಂಕ್ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಇನ್ನೊಂದು ದಿನ ಬಾಕಿಯಿದೆ. ಆದರೆ ದಿನದಿಂದ ದಿನಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ತೀವ್ರ ಕುತೂಹಲ ಮೂಡಿಸುತ್ತಿದೆ. ಘಟಾನುಘಟಿ ಕಾಂಗ್ರೆಸ್ ಮುಖಂಡರು, ಶಿಮುಲ್ ಆಡಳಿತ ಮಂಡಳಿಯಲ್ಲಿದ್ದವರು ಉಮೇದುವಾರಿಕೆ ಸಲ್ಲಿಸುತ್ತಿದ್ದಾರೆ. ಈ ಮಧ್ಯೆ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಡಿಸಿಸಿ ಅಖಾಡಕ್ಕೆ ಎಂಟ್ರಿಯಾಗಲಿದ್ದಾರೆ ಎಂಬುದು ಹೊಸ ಸಂಗತಿ.

ಜೂ.19ರಂದು ಬೇಳೂರು ನಾಮಪತ್ರ ಸಲ್ಲಿಸುವುದು ನಿಶ್ಚಿತವಾಗಿದೆ. ಸಾಗರದ ಮಾಲ್ವೆ ಸಹಕಾರ ಸಂಘದಿಂದ ಅವರು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ರಾಜಕೀಯದಲ್ಲಿ ಸದಾ ಸುದ್ದಿಯಲ್ಲಿರುವ ಬೇಳೂರು ಈಗ ಸಹಕಾರಿ ವಲಯದತ್ತ ಮುಖ ಮಾಡಿರುವುಉದು ಆಶ್ಚರ್ಯಕ್ಕೆ ಕಾರಣವಾಗಿದೆ.
ಈಗಾಗಲೇ ಶಿಮುಲ್ ಮಾಜಿ ಅಧ್ಯಕ್ಷ ಡಿ.ಆನಂದ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಜೆ.ಪಿ.ಯೋಗೇಶ್, ಶಿವಮೊಗ್ಗ ಎಪಿಎಂಸಿ ಮಾಜಿ ನಿರ್ದೇಶಕ ಎಚ್.ಬಿ.ದಿನೇಶ್, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ವಿಜಯಕುಮಾರ್, ಸಿ.ಹನುಮಂತ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇನ್ನುಳಿದ ಎರಡು ದಿನಗಳಲ್ಲಿ ಯಾರು ನಾಮಪತ್ರ ಸಲ್ಲಿಸಲಿದ್ದಾರೆ? ಎಂಬುದು ಕುತೂಹಲ ಮೂಡಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net