‘ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ’ ಅಂತ ವಾಟ್ಸ್ಯಾಪ್ ಮೆಸೇಜ್ ಮಾಡಿ ನೇಣಿಗೆ ಶರಣಾದ ಡಿಸಿಸಿ ಬ್ಯಾಂಕ್ ನಿರ್ದೇಶಕನ ಪತ್ನಿ!

patni
Published on

ಚಿಕ್ಕೋಡಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ ಅವರ ಪತ್ನಿ ಶ್ರುತಿ (29) ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿರುವ ತಮ್ಮ ಮನೆಯ ಬೆಡ್ ರೂಮ್‌ನಲ್ಲಿ ಅವರು ಫ್ಯಾನ್‌ಗೆ ಸೀರೆ ಕಟ್ಟಿ ನೇಣು ಬಿಗಿದುಕೊಂಡಿದ್ದಾರೆ.

‘ಪ್ಲೀಸ್ ಟೇಕ್ ಕೇರ್ ಆಫ್ ಮೈ ಡಾಟರ್’ ಎಂದು ತಮ್ಮ ತಂದೆಗೆ ವಾಟ್ಸ್ಯಾಪ್ ಮೆಸೇಜ್ ಕಳಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಪತಿಯ ಜತೆ ಮನಸ್ತಾಪ ಮತ್ತು ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net