

ತೋವಿನಕೆರೆ : ರೈತರು ಬೆಳೆದಂತಹ ಬೆಳೆಗಳಿಗೆ ತಾವೇ ಬೆಲೆ ನಿರ್ಧಾರ ಮಾಡುವಂತದ್ದಾಗಬೇಕು. ಸರ್ಕಾರದಿಂದ ಬೆಂಬಲ ಬೆಲೆ ದರ ನಿಗದಿಯಾಗುವ ಮೊದಲೇ ರೈತರು ಮಾರಾಟ ಮಾಡಿ ಬಿಡುತ್ತಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ ಶನಿವಾರ ಆಯೋಜಿಸಿದ್ದ 36ನೇ ಡಿಸಿಸಿ ಬ್ಯಾಂಕ್ ಶಾಖೆ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರಿಗೆ ಕೊಳವೆಬಾವಿಗೆ ಉಚಿತ ವಿದ್ಯುತ್ ಹಾಗೂ ಬಡ್ಡಿ ರಹಿತ ಸಾಲವನ್ನು ಸರ್ಕಾರದಿಂದ ಕೊಡಲಾಗುತ್ತಿದೆ. ಇದು ಸದ್ಬಳಕೆಯಾಗಬೇಕಾದರೆ ಹೆಚ್ಚು ಹೆಚ್ಚು ಲಾನುಭವಿಗಳು ಇದರ ಪ್ರಯೋಜನ ಪಡೆಯುವಂತಾಗಬೇಕು ಎಂದರು.
ವ್ಯವಸಾಯೋತ್ಪನ್ನ ಸಹಕಾರ ಸಂಘಗಳು ರೈತರು ಬೆಳೆಯುವ ಬೆಳೆಗಳ ವಹಿವಾಟು ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಕೊಳವೆಬಾವಿ ಸಾಲ ನೀಡುವ ಯೋಜನೆ ಜಾರಿಯಾಗಲಿ. ರೈತಾಪಿ ವರ್ಗ ಎಣ್ಣೆಬೀಜ ಬೆಳೆಯುವ ಬೆಳೆಗೆ ಆದ್ಯತೆ ನೀಡಬೇಕಾಗಿದೆ ಎಂದು ಮನವಿ ಮಾಡಿದರು.
ಸಹಕಾರಿಧುರೀಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ನೇತೃತ್ವದ ತೋವಿನಕೆರೆ ಡಿಸಿಸಿ ಬ್ಯಾಂಕ್ ಶಾಖೆಯ ಆನ್‌ಲೈನ್ ವಹಿವಾಟು ವ್ಯವಸ್ಥೆ ರಾಜ್ಯದ ಇತರೆ ಡಿಸಿಸಿ ಬ್ಯಾಂಕ್‌ಗಳಿಗೆ ಮಾದರಿ ಆಗಿದೆ. ಡಿಜಿಟಲ್ ವವ್ಯಸ್ಥೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸರ್ಕಾರದ ಸವಲತ್ತುಗಳು ನೇರವಾಗಿ ರೈತರ ಖಾತೆಗೆ ಜಮೆ ಆಗಲಿದೆ ಎಂದರು.
ಮೃತರೈತರ ಸಾಲಮನ್ನಾ: ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದು ಮೃತಪಟ್ಟ 6882 ರೈತರ 21ಕೋಟಿ ರೂಪಾಯಿ ಸಾಲಮನ್ನಾ ಆಗಿದೆ. ಆ ಕುಟುಂಬಗಳನ್ನು ಋಣುಮುಕ್ತರನ್ನಾಗಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.
ಕೊರಟಗೆರೆ ತಾಲೂಕಿನ 15845 ರೈತರ 55 ಕೋಟಿ ರೂಪಾಯಿ ಬೆಳೆಸಾಲ ಮನ್ನಾವಾಗಿದೆ. ಈಗ ತೋವಿನಕೆರೆ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ 1086 ರೈತರಿಗೆ 5 ಕೋಟಿ 4ಲಕ್ಷ ಸಾಲಸೌಲಭ್ಯ ಆನ್‌ಲೈನ್ ಮೂಲಕ ವರ್ಗಾವಣೆ ಆಗಿದೆ ಎಂದು ತಿಳಿಸಿದರು.
ಸಂಸದ ಜಿ.ಎಸ್.ಬಸವರಾಜು, ಮಾಚಿ ಸಚಿವ ಸೊಗಡುಶಿವಣ್ಣ, ಕ್ರೀಬ್ಕೋ ನಿರ್ದೆಶಕ ಆರ್.ರಾಜೇಂದ್ರ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನರಸಿಂಹಯ್ಯ, ಹನುಮಾನ್, ಅನ್ನಪೂರ್ಣ ವೆಂಕಟನಂಜಪ್ಪ, ವಿಎಸ್‌ಎಸ್‌ಎನ್ ಅಧ್ಯಕ್ಷ ನಾರಾಯಣ್, ಜಿಪಂ ಸದಸ್ಯೆ ಅಕ್ಕಮಹಾದೇವಿ, ತಾಪಂ ಸದಸ್ಯೆ ಜ್ಯೋತಿ, ಸುಮಾರಾಜು, ಗಿರಿಜಾ, ಡಿಸಿಸಿ ಬ್ಯಾಂಕ್ ಜಿಲ್ಲಾ ಪ್ರಧಾನ ವ್ಯವಸ್ಥಾಪಕ ರಾಮಕೃಷ್ಣನಾಯಕ್, ಸಲಹೆಗಾರ ಜಂಗಮ್ಮಪ್ಪ, ವ್ಯವಸ್ಥಾಪಕ ಮಂಜುನಾಥ, ಕೊರಟಗೆರೆ ನಿರ್ದೇಶಕರಾದ ಹನುಮಾನ್, ವ್ಯವಸ್ಥಾಪಕರಾದ ಲೊಕೇಶ್, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.
ಖಾಸಗಿ ಬ್ಯಾಂಕ್ ಹಾಗೂ ಮೀಟರ್ ಬಡ್ಡಿ ದಂಧೆಗೆ ಸರ್ಕಾರ ಕಡಿವಾಣ ಹಾಕಬೇಕಾಗಿದೆ. ಸಹಕಾರಿ ಬ್ಯಾಂಕ್‌ಗಳಲ್ಲಿ ಚಿನ್ನದ ಮೇಲೆ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ದೊರೆಯಲಿದೆ. ಖಾಸಗಿ ಫೈನಾನ್ಸ್‌ಗಳಲ್ಲಿ ಚಿನ್ನ ಅಡವಿಟ್ಟು ರೈತರು ಸಾಲ ಪಡೆಯುವುದು ನಿಲ್ಲಬೇಕು. ಕೆ.ಎನ್.ರಾಜಣ್ಣ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ಖಾಸಗಿ ೈನಾನ್ಸ್ ಕಂಪನಿಗಳ ಹಗಲು ದರೋಡೆಗೆ ಕಡಿವಾಣ ಹಾಕಬೇಕಿದೆ. ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ವಹಿವಾಟು ನಡೆಸಬೇಕು. ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಅನುಕೂಲವಾಗಿದೆ. ಇದರ ರೂವಾರಿ ಕೆ.ಎನ್.ರಾಜಣ್ಣ. ಜಿ.ಎಸ್.ಬಸವರಾಜು ಸಂಸದ