ತನಿಖೆ ನಡೆಸಿ ತಪ್ಪಾಗಿದ್ದರೆ ತಲೆಬಾಗುವೆ

9-klr-3 copy
Published on

ಕೋಲಾರ: ಕೆರೆ-ಕುಂಟೆಗಳಿಗೆ ಬೆಳೆ ಸಾಲ ನೀಡಿರುವುದಾಗಿ ಮಾಡಿರುವ ವೈಯಕ್ತಿಕ ದ್ವೇಷದ ಆರೋಪಗಳ ಕುರಿತು ತನಿಖೆ ನಡೆಸಿ, ತಪ್ಪಾಗಿದ್ದರೆ ತಲೆ ಬಾಗುವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‌ಗೆ ಮನವರಿಕೆ ಮಾಡಿಕೊಟ್ಟರು.

ಮಂಗಳವಾರ ಜಿಲ್ಲೆಗೆ ಆಗಮಿಸಿದ್ದ ಸಚಿವರನ್ನು ವೇಮಗಲ್ ಸೊಸೈಟಿ ಮುಂಭಾಗ ಅಭಿನಂದಿಸಿದ ವೇಳೆ ಕೆರೆ-ಕುಂಟೆಗಳಿಗೆ ಬೆಳೆಸಾಲ ನೀಡಿ ಕೋಟಿಗಟ್ಟಲೆ ಅವ್ಯವಹಾರ ನಡೆದಿದೆ ಎಂದು ಚಿಕ್ಕಬಳ್ಳಾಪುರದ ಮಾಜಿ ನಿರ್ದೇಶಕರೊಬ್ಬರು ಆರೋಪಿಸಿರುವ ಕುರಿತು ಸಚಿವರು ಪ್ರಶ್ನಿಸಿದರು.

ಉತ್ತರಿಸಿದ ಗೋವಿಂದಗೌಡ, ರೈತರಿಗೆ ಕೋಟಿಗಟ್ಟಲೆ ಸಾಲ ನೀಡಲ್ಲ. 3 ಲಕ್ಷದವರೆಗೂ ಬೆಳೆಸಾಲ ನೀಡಲಾಗುತ್ತಿದೆ. ಕೆರೆ-ಕುಂಟೆಗಳಿಗೆ ಸಾಲ ನೀಡಿರುವುದು ಕಂಡುಬಂದಲ್ಲಿ ನೀವೇ ತನಿಖೆಗೆ ಆದೇಶಿಸಿ, ಪತ್ತೆ ಮಾಡಿಸಿದರೆ ಆ ಕ್ಷಣ ಅಧ್ಯಕ್ಷ ಸ್ಥಾನದಲ್ಲಿ ಇರುವುದಿಲ್ಲ ಎಂದರು.

ಬ್ಯಾಂಕಿನ ಅಭಿವೃದ್ಧಿ ಸಹಿಸಲಾಗದವರು ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.

ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ವೇಮಗಲ್ ಎಸ್‌ಎಫ್‌ಸಿಎಸ್ ಅಧ್ಯಕ್ಷ ನಾಗೇಶ್, ಸೊಸೈಟಿ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net