ಸೀಶಕ್ತಿ ಸಂಘಗಳಿಗೆ ಶೀಘ್ರ ಸಾಲ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದೇಗೌಡ ಹೇಳಿಕೆ

18 Srinivaspur -1
Published on

ಶ್ರೀನಿವಾಸಪುರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡುವ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಈಗಾಗಲೆ ಸಾಲ ಮರುಪಾವತಿ ಮಾಡಿರುವ ಸಂಘಗಳಿಗೆ ಶೀಘ್ರ ಹೊಸ ಸಾಲ ನೀಡಲಾಗುವುದು. ಮಧ್ಯವರ್ತಿಗಳ ಕೈಗೆ ಸಾಲ ಮರುಪಾವತಿ ಮಾಡಲು ಹಣ ನೀಡಬೇಡಿ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದೇಗೌಡ ಮನವಿ ಮಾಡಿದರು.

ನಗರದ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಶನಿವಾರ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಷ್ಟ ಕಾಲದಲ್ಲಿಯೂ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವ ಮೂಲಕ ಬ್ಯಾಂಕಿನ ಪ್ರಗತಿಗೆ ಸಹಕಾರ ನೀಡುತ್ತಿದ್ದಾರೆ. ಮಾ.31ಕ್ಕೆ ಶೇ.100ರಷ್ಟು ಸಾಲ ಮರುಪಾವತಿ ಮಾಡಿ ಬ್ಯಾಂಕನ್ನು ಸುಸ್ಥಿ ಸಾಲದಿಂದ ಪಾರು ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ವಾರದ ಗುಂಪು ಸೇರುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಾಲ ಮರುಪಾವತಿ ಮಾಡಿರುವ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡುತ್ತೇವೆ ಹಾಗೂ ಸಾಲ ಮರುಪಾವತಿ ಮಾಡುವವರಿಗೂ ಸಾಲ ನೀಡಲಾಗುತ್ತದೆ. ಮೇ 1ರ ಒಳಗಾಗಿ ಬ್ಯಾಂಕಿನ ಹೊಸ ಶಾಖೆಗೆ ಹಳೆಯ ಬ್ಯಾಂಕನ್ನು ವರ್ಗಾವಣೆ ಮಾಡಬೇಕು. ಅಷ್ಟರ ಒಳಗಾಗಿ ನಿಮ್ಮ ಕಡತಗಳನ್ನು ಸರಿಪಡಿಸಿಕೊಳ್ಳಿ ಎಂದು ಸೂಚಿಸಿದರು.

ನಿರ್ದೇಶಕ ವೆಂಕಟರೆಡ್ಡಿ, ಕೋಲಾರ ಬ್ಯಾಂಕಿನ ಸಿಜಿ ಎಂ.ಶಿವಕುಮಾರ್, ಶ್ರೀನಿವಾಸಪುರ ಶಾಖೆ ವ್ಯವಸ್ಥಾಪಕ ಭಾನುಪ್ರಕಾಶ್, ಸಿಇಒಗಳಾದ ಪ್ರಭಾಕರ್‌ರೆಡ್ಡಿ, ಶಿವಾರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net