ಸ್ತ್ರೀ ಶಕ್ತಿ ಸಂಘಗಳಿಗೆ ವಾರದೊಳಗೆ 7 ಕೋಟಿ ರೂ. ಸಾಲ ವಿತರಣೆ

07 Srinivaspur Photo-02-2020 Ph- 2
Published on

ಶ್ರೀನಿವಾಸಪುರ: ಸರ್ಕಾರ ಬದಲಾಗಿದ್ದರಿಂದ ನಿರೀಕ್ಷೆಯಂತೆ ಡಿಸಿಸಿ ಬ್ಯಾಂಕಿಗೆ ಠೇವಣಿ ಬಾರದೆ ಸಾಲ ವಿತರಣೆಯಲ್ಲಿ ವಿಳಂಭವಾಗಿದೆ. ಆದರೆ ವಾರದೊಳಗೆ ಎಲ್ಲ ಸ್ತ್ರೀ ಶಕ್ತಿ ಸಂಘಗಳಿಗೂ ಸಾಲ ನೀಡಲಾಗುವುದು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭರವಸೆ ನೀಡಿದರು.

ತಾಲೂಕಿನ ಸೋಮಯಾಜಲಪಲ್ಲಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರದಿಂದ ಶುಕ್ರವಾರ 159 ಸಂಘಗಳಿಗೆ 7 ಕೋಟಿ ರೂ. ಶೂನ್ಯ ಬಡ್ಡಿಯಲ್ಲಿ ಸಾಲ ವಿತರಿಸಿ ಮಾತನಾಡಿ, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ನೇರ ನಗದು ಕೊಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಕೆಲವರು ಇದನ್ನು ಸಹಿಸದೆ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ, ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು 30ರಿಂದ 50ಸಾವಿರದವರೆಗೆ ಸಾಲದ ಮೊತ್ತ ಏರಿಸಲಾಗಿದೆ. ಇದನ್ನು ಒಂದು ಲಕ್ಷ ಕೊಡುವ ದಿನಗಳು ದೂರವಿಲ್ಲ ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಸೋಮಯಾಜಲಪಲ್ಲಿ ವಿಎಸ್‌ಎಸ್ ಅಧ್ಯಕ್ಷೆ ನಾಗರತ್ನಮ್ಮ, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಜಿಪಂ ಸದಸ್ಯ ಗೋವಿಂದಸ್ವಾಮಿ, ಗ್ರಾಪಂ ಅಧ್ಯಕ್ಷ ಮಂಜುನಾಥರೆಡ್ಡಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂಜಯ್‌ರೆಡ್ಡಿ, ಕೋಚಿಮುಲ್ ನಿರ್ದೇಶಕ ಹನುಮೇಶ್, ಎಪಿಎಂಸಿ ಅಧ್ಯಕ್ಷ ರಾಜೇಂದ್ರ ಪ್ರಸಾದ್, ನಾಗದೇನಹಳ್ಳಿ ಡೇರಿ ಅಧ್ಯಕ್ಷ ಸೀತಾರಾಮರೆಡ್ಡಿ, ಟಿಪಿಎಸ್ ಮಾಜಿ ಸದಸ್ಯ ಕೆ.ಕೆ. ಮಂಜು, ಜೆ.ತಿಮ್ಮಸಂದ್ರ ಗ್ರಾಪಂ ಅಧ್ಯಕ್ಷ ವೆಂಕಟರೆಡ್ಡಿ ಇದ್ದರು.

ದಿವಗಂತ ಚೆನ್ನಪ್ಪ ಅವರು ನನ್ನ ರಾಜಕೀಯ ಪಿತಾಮಹ ಅವರ ಆಶಯದಂತೆ ಕೊನೆಯುಸಿರು ಇರುವವರೆಗೂ ಜನಸೇವೆ ಮಾಡುತ್ತೇನೆ. ಅಲ್ಲದೆ, ಸಿದ್ದರಾಮಯ್ಯ ಅವರ ಆಡಳಿತದಲ್ಲಿ ನೀಡಿದ ಅನ್ನಭಾಗ್ಯ ಯೋಜನೆಯಿಂದ ರಾಜ್ಯ ಹಸಿವು ಮುಕ್ತವಾಗಿದೆ. ಇದರಿಂದಾಗಿ ಎಲ್ಲಿಯೂ ಅನ್ನಕ್ಕಾಗಿ ಭಿಕ್ಷಕರು ಕಾಣುತ್ತಿಲ್ಲ. ಅದೇ ನನಗೆ ತೃಪ್ತಿ.

ಮಾಜಿ ಸ್ಪೀಕರ್ ರಮೇಶ್ ಕುಮಾರ್

ಪಾದಯಾತ್ರೆ ನಡೆಸೋಣ: ಸೋಮಯಾಜಲಪಲ್ಲಿ ಗ್ರಾಪಂ ವ್ಯಾಪ್ತಿಯ ನೆರ್ನಹಳ್ಳಿ ಗ್ರಾಮದ ಮಹಿಳೆಯರು ಅಕ್ರಮ ಸಾರಾಯಿ ಮಾರಾಟ ತಡೆಯಲು ಸಲ್ಲಿಸಿದ ಮನವಿ ಆಲಿಸಿ ಈ ಬಗ್ಗೆ ನಾನು ಮಂತ್ರಿಯಾಗಿದ್ದಾಗ ಕಡಿವಾಣ ಹಾಕಲಾಗಿತ್ತು. ಇತ್ತೀಚಿಗೆ ಅಕ್ರಮ ಮಾರಾಟ ಕಂಡು ಬರುತ್ತಿದೆ. ಆದ್ದರಿಂದ ಸರ್ಕಾರದ ಕಣ್ಣು ತೆರೆಸಲು ಎಲ್ಲ ಮಹಿಳೆಯರು ಒಗ್ಗೂಡಿ ಪಾದಯಾತ್ರೆ ನಡೆಸೋಣ ಎಂದು ರಮೇಶ್ ಕುಮಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net