ರಾಗಿ ಖರೀದಿ ಕೇಂದ್ರಕ್ಕೆ ಡಿಸಿ ಭೇಟಿ

27 03 2025_BGR RURAL_PAGE_3
ದೊಡ್ಡಬಳ್ಳಾಪುರದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಗ್ರಾಣಕ್ಕೆ ಜಿಲ್ಲಾಧಿಕಾರಿ ಬಸವರಾಜು ಭೇಟಿ ನೀಡಿ ಚೀಲಗಳನ್ನು ಪರಿಶೀಲಿಸಿದರು. ಆಹಾರ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಶಂಕರಮೂರ್ತಿ, ಜಿಲ್ಲಾ ವ್ಯವಸ್ಥಾಪಕ ನಿಟ್ಟೂರ್​ ತನ್ನೀರ್​ ಆಲಿ ಹಾಗೂ ಸಿಬ್ಬಂದಿ ಇದ್ದರು.
Published on

ದೊಡ್ಡಬಳ್ಳಾಪುರ : ನಗರದ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರದ ರಾಗಿ ಖರೀದಿ ನೋಂದಣಿ ಕೇಂದ್ರ ಹಾಗೂ ನಗರದ ಚಿಕ್ಕಬಳ್ಳಾಪುರ ರಸ್ತೆ ಸರ್ಕಾರಿ ತಾಯಿ&ಮಗು ಆಸ್ಪತ್ರೆ ಸಮೀಪವಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿಗೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈತರನ್ನು ದಿನಗಟ್ಟಲೇ ಕಾಯಿಸದೆ ರೈತರು ತಂದ ರಾಗಿ ಕೇಂದ್ರದಲ್ಲಿ ಖರೀದಿ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ರಾಗಿ ನೋಂದಣಿ ಹಾಗೂ ಖರೀದಿ ವಿವರ ಪರಿಶೀಲಿಸಿದ ಡಿಸಿ, ತೂಕ ಹಾಗೂ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕಿದೆ ಎಂದರು. ತಾಲೂಕಿನ ರಾಗಿ ಖರೀದಿ ಕೇಂದ್ರದ ಅಧಿಕಾರಿ ಎಚ್​.ಎನ್​.ನಾರಾಯಣ ಮಾತನಾಡಿ, ರಾಗಿ ಖರೀದಿಗೆ ಜೂ.30 ಕೊನೆ ದಿನವಾಗಿದೆ. ಕಚೇರಿಯಿಂದ ದೂರವಾಣಿ ಕರೆ ಮಾಡಿದ ರೈತರು ನಿಗದಿತ ವೇಳೆಗೆ ಬಂದು ರಾಗಿ ಚೀಲಗಳನ್ನು ಖರೀದಿ ಕೇಂದ್ರದಲ್ಲಿ ನೀಡಬೇಕಿದೆ. ಉಗ್ರಾಣದಲ್ಲಿ ನಿತ್ಯ 70&80 ಟ್ರಾ$್ಯಕ್ಟರ್​ಗಳಿಂದ ಖರೀದಿಸುವ ಸಾಮರ್ಥ್ಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ನಿರ್ವಹಣೆ ಕಷ್ಟವಾಗುತ್ತದೆ. ಖರೀದಿ ಕೇಂದ್ರ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿಸ್ಥಿತಿ ಸುಧಾರಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net