ಮೆಳ್ಳಹಳ್ಳಿ ಸರ್ಕಾರಿ ಶಾಲೆಗೆ ಡಿಸಿ ಭೇಟಿ

28KMD-1
ಕೆ.ಎಂ.ದೊಡ್ಡಿ ಸಮೀಪ ಮೆಳ್ಳಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳೊಂದಿಗೆ ಡಾ.ಕುಮಾರ, ಶೇಕ್ ತನ್ವಿರ್ ಅಹಮದ್ ಚರ್ಚಿಸುತ್ತಿರುವುದು.
Published on

ಕೆ.ಎಂ.ದೊಡ್ಡಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಅಹಮದ್ ಸಮೀಪದ ಮೆಳ್ಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.

ಮತಗಟ್ಟೆ ಸಂಖ್ಯೆ 204 ಮತ್ತು 205ಕ್ಕೆ ಭೇಟಿ ನೀಡಿ ಪರಿಶೀಲಿಸುವ ವೇಳೆ ಶಾಲೆಯಲ್ಲಿದ್ದ ಮಕ್ಕಳೊಂದಿಗೆ ಅಧಿಕಾರಿಗಳು ಸ್ವಲ್ಪ ಸಮಯ ಕಳೆದರು. ಬಿಸಿಯೂಟ, ಮೊಟ್ಟೆ, ಹಾಲು ಮತ್ತು ರಾಗಿ ಮಾಲ್ಟ್ ಸರಿಯಾದ ಸಮಯಕ್ಕೆ ಸಿಗುತ್ತಿದೆಯೇ ಎಂದು ಡಿಸಿ ಡಾ.ಕುಮಾರ ಮಕ್ಕಳನ್ನು ಪ್ರಶ್ನಿಸಿದಾಗ, ಎಲ್ಲವೂ ನಿಗದಿತ ಸಮಕ್ಕೆ ದೊರೆಯುತ್ತಿದ್ದು, ಉತ್ತಮವಾಗಿದೆ ಎಂದು ಮಕ್ಕಳು ಉತ್ತರಿಸಿದರು.

ಉತ್ತಮವಾಗಿ ವ್ಯಾಸಂಗ ಮಾಡಿ ಶಾಲೆಗೆ ಕೀರ್ತಿ ತರಬೇಕು. ಸರ್ಕಾರಿ ಶಾಲೆಯಲ್ಲಿ ಅಗತ್ಯ ಸೇವೆ ದೊರಕುತ್ತಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಉಪತಹಸೀಲ್ದಾರ್ ಶಿವಲಿಂಗಯ್ಯ, ಗ್ರಾಮ ಲೆಕ್ಕಾಧಿಕಾರಿ ಜೆ.ರವಿ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net