21ರಂದು ಡಿಸಿ ಗ್ರಾಮ ವಾಸ್ತವ್ಯ

CHITRADURGA NEW DC GRJ DIVYA PRRBUjjj
Published on

ಚಿತ್ರದುರ್ಗ: ತಾಲೂಕಿನ ಹಳೇರಂಗಾಪುರದಲ್ಲಿ ಜ.21ರಂದು ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮವಾಸ್ತವ್ಯ ಹೂಡಿ, ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ. ಹಿರಿಯೂರು ತಾಲೂಕು ಶಿಡ್ಲಯ್ಯನಕೋಟೆ, ಚಳ್ಳಕೆರೆ ತಾಲೂಕು ಚನ್ನಮ್ಮನಾಗ್ತಿಹಳ್ಳಿ, ಹೊಸದುರ್ಗ ತಾಲೂಕಿನ ರಂಗವ್ವನಹಳ್ಳಿ, ಹೊಳಲ್ಕೆರೆ ತಾಲೂಕಿನ ಗುಡ್ಡದ ಸಾಂತೇನಹಳ್ಳಿ ಹಾಗೂ ಮೊಳಕಾಲ್ಮೂರು ತಾಲೂಕು ರಾಜಾಪುರದಲ್ಲಿ ಆಯಾ ತಹಸೀಲ್ದಾರ್ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮ ವಾಸ್ತವ್ಯದಲ್ಲಿ ಪಾಲ್ಗೊಂಡು, ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆಂದು ಎಡಿಸಿ ಇ. ಬಾಲಕೃಷ್ಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net