ದಿ.ಕದ್ರಿ ಪತ್ನಿಗೆ ಆರೈಕೆ ಮಾಡುವ ಮೂಲಕ ಮೆಚ್ಚುಗೆ ಗಳಿಸಿದ ಡಿಸಿ

dc
Published on

ಮಂಗಳೂರು: ಅಧಿಕಾರಿಗಳು ತಮ್ಮ ಕೆಲಸವನ್ನೂ ಬಿಟ್ಟು ತಮ್ಮ ಮಾನವೀಯ ಮುಖ ತೋರಿದಾಗ ಜನರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಂತಹ ಕ್ಷಣಗಳಿಗೆ ಕಾರಣರಾಗಿದ್ದಾರೆ.

ಬಂಟ್ವಾಳದ ಸಜಿಪದಲ್ಲಿ ಡಾ.ಕದ್ರಿ ಗೋಪಾಲನಾಥ ಅವರ ಸ್ಮರಣಾರ್ಥ ಸೋಮವಾರ ಕದ್ರಿ ಸಂಗೀತ ಸೌರಭದ ವೇಳೆ ಕದ್ರಿಯವರ ಪತ್ನಿ ಸರೋಜಿನಿ ಅಸ್ವಸ್ಥರಾದಾಗ ಡಾ.ರಾಜೇಂದ್ರ ಅವರಿಗೆ ತಕ್ಷಣ ಆರೈಕೆ ನೀಡಿದರು.

ಕದ್ರಿಯವರ ಹುಟ್ಟಿದ ದಿನದ ಪ್ರಯುಕ್ತ ಕದ್ರಿ ಸಂಗೀತ ಸೌರಭ ಏರ್ಪಡಿಸಲಾಗಿತ್ತು. ಈ ಸಂದರ್ಭ ವೇದಿಕೆ ಎದುರು ಕುಳಿತಿದ್ದ ಸರೋಜಿನಿ ಭಾವುಕರಾದರಲ್ಲದೆ ತಲೆ ಸುತ್ತು ಬಂದಂದಾಯಿತು. ಈ ಸಂದರ್ಭ ಅಲ್ಲಿದ್ದ ಜಿಲ್ಲಾಧಿಕಾರಿ ತಕ್ಷಣ ಅವರನ್ನು ಪರಿಶೀಲಿಸಿ, ಅವರಿಗೆ ಸಕ್ಕರೆ ನೀರು ಕೊಟ್ಟು ಆರೈಕೆ ಮಾಡಿದರು.
ಕದ್ರಿ ಗೋಪಾಲನಾಥರ ಹೆಸರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಡಾ.ಕದ್ರಿ ಗೋಪಾಲನಾಥ ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಲಾಗುತ್ತಿದ್ದು, ಸೋಮವಾರ ಮೋರ್ಸಿಂಗ್ ವಿದ್ವಾನ್ ಡಾ.ಎಲ್.ಭೀಮಾಚಾರ್ಯ ಮತ್ತು ಗಾಯಕ ಹುಲ್ಯಾಳ ಮಹದೇವಪ್ಪ ಅವರಿಗೆ ಈ ವರ್ಷದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net