ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ ಡಿಸಿ

30 09 2025_BGR_RURAL_PAGE_7A
ದೇವನಹಳ್ಳಿಯ ಚೌಡೇಶ್ವರಿ ದೇವಾಲಯದಲ್ಲಿ ದೇವಿಯ ಮುಂದೆ ಮಕ್ಕಳಿಗೆ ಡಿಸಿ ಎ.ಬಿ. ಬಸವರಾಜು ಪ್ರಥಮ ಅಕ್ಷರಾಭ್ಯಾಸ ಮಾಡಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್​, ಪುರಸಭಾ ಮುಖ್ಯಾಧಿಕಾರಿ ಎ.ಶಿವಮೂರ್ತಿ ಇದ್ದರು.
Published on

ದೇವನಹಳ್ಳಿ : ಪಟ್ಟಣದ ಹಳೇ ತಾಲೂಕು ಕಚೇರಿ ರಸ್ತೆಯಲ್ಲಿರುವ ಸರ್ವಶಕ್ತಾ$್ಯತ್ಮಕೆ ಶ್ರೀಚೌಡೇಶ್ವರಿ ದೇವಿಗೆ ಶರನ್ನವರಾತ್ರಿ ಅಂಗವಾಗಿ ಪ್ರತಿದಿನ ಒಂದೊಂದು ಬಗೆಯ ಅಲಂಕಾರ ಹಾಗೂ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಸರಸ್ವತಿ ಪೂಜೆ ಪ್ರಯುಕ್ತ ಸೋಮವಾರ ಜಿಲ್ಲಾಧಿಕಾರಿ ಡಾ.ಎ.ಬಿ.ಬಸವರಾಜು ಅವರು ಪತ್ನಿ ಮತ್ತು ಮಕ್ಕಳ ಜತೆ ದೇವಾಲಯಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪುಟ್ಟಮಕ್ಕಳಿಂದ ದೇವಿಯ ಮುಂದೆ ಓಂ ಮತ್ತು ಅ, ಅಮ್ಮ ಅಕ್ಷರವನ್ನು ಅಕ್ಕಿ ತುಂಬಿದ ತಟ್ಟೆಯಲ್ಲಿ ತಿದ್ದಿಸುವ ಮೂಲಕ ಪ್ರಥಮ ಅಕ್ಷರಾಭ್ಯಾಸ ಮಾಡಿಸಿ ಹರಸಿದರು.

ಜಿಲ್ಲಾಧಿಕಾರಿ ಎಬಿ. ಬಸವರಾಜು ಮಾತನಾಡಿ, ನವರಾತ್ರಿ ಪೂಜೆ ನಾಡದೇವಿಯ ಹಬ್ಬವಾಗಿದ್ದು, ಇದರ ವಿಶೇಷವಾಗಿ ಇಲ್ಲಿ ಪ್ರತಿವರ್ಷ ನವರಾತ್ರಿ ಆರಂಭವಾದ 7ನೇ ದಿನ ಮೂಲ ನಕ್ಷತ್ರದಂದು ಶಾರದಾಮಾತೆಯ ಜನ್ಮದಿನವೂ ಆಗಿರುವುದರಿಂದ ಸರಸ್ವತಿ ಪೂಜೆಯ ಅಂಗವಾಗಿ ಮೊದಲು ಅಕ್ಷರ ಕಲಿಯುವ ಪುಟ್ಟ ಕಂದಮ್ಮಗಳಿಗೆ ಅಕ್ಷರಬ್ಯಾಸ ಮಾಡಿಸುತ್ತಾ ಬರಲಾಗಿದೆ ಎಂದರು. ಮಕ್ಕಳು ಓದಿ ವಿದ್ಯಾವಂತರು, ಬುದ್ದಿವಂತರಾಗಿ ದೇಶದ ಕೊಡುಗೆಗಳಾಗಿ ಉತ್ತಮ ಜ್ಞಾನವಂತರಾಗಿ ಬೆಳೆಯಲಿ ಎಂಬ ಸದಾಶಯದೊಂದಿಗೆ ಪುರಾತನ ಕಾಲದಿಂದಲೂ ರೂಢಿಸಿಕೊಂಡು ಬಂದ ಸಂಪ್ರದಾಯ ಈ ಅಕ್ಷರಭ್ಯಾಸವಾಗಿದೆ. ಎಲ್ಲ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ದೇವಿಯನ್ನು ಪ್ರಾರ್ಥಿಸಿ ಮಕ್ಕಳಿಗೆ ಸಂತೋಷದಿಂದ ಅಕ್ಷರಭ್ಯಾಸ ಮಾಡಿಸಿದ್ದೇನೆ, ಜಿಲ್ಲೆಯಲ್ಲಿ ಉತ್ತಮವಾಗಿ ಮಳೆ, ಬೆಳೆಯಾಗಿ ರೈತರ ಬದುಕು ಹಸನಾಗಲಿ, ಎಲ್ಲರಿಗೂ ಚೌಡೇಶ್ವರಿ ಶುಭವನ್ನುಂಟು ಮಾಡಲಿ ಎಂದು ಹೇಳಿದರು.

ನಿವೃತ್ತ ತಹಸೀಲ್ದಾರ್​ ಹಾಗೂ ದೇವಾಲಯ ಸಮಿತಿ ಪ್ರಧಾನ ಸಂಚಾಲಕ ಪಿ. ಗಂಗಾಧರ್​, ದೇವಾಲಯ ಸಮಿತಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣಪ್ಪ, ಸಮಾಜ ಸೇವಕ ಸಮಿತಿಯ ಎನ್​.ಮುನಿರಾಜು, ಪುರಸಭಾ ಅಧ್ಯಕ್ಷ ಡಿ.ಎಂ. ಮುನಿಕೃಷ್ಣ, ಪುರಸಭಾ ಮಾಜಿ ಸದಸ್ಯ ಪಿ.ಜಯರಾಮ್​, ಮಾಜಿ ಲಯನ್ಸ್​ ಅಧ್ಯಕ್ಷ ಶೀರಾಮಯ್ಯ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net