ವಿವಿಧೆಡೆ ಡಿಸಿ ದಿಢೀರ್​ ಭೇಟಿ

DC suddenly visited different places
ವಿಜಯಪುರದ ಟಕ್ಕೆಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ಅಗ್ನಿಶಾಮಕ, ಅರಣ್ಯ ಇಲಾಖೆ, ನಿರಾಶ್ರಿತರ ಕೇಂದ್ರ, ಜಿಲ್ಲಾ ತರಬೇತಿ ಶಿಕ್ಷಣ ಸಂಸ್ಥೆ, ಕೇಂದ್ರೀಯ ವಿದ್ಯಾಲಯ, ದೇವರಾಜ ಅರಸು ಮೆಟ್ರಿಕ್​ ನಂತರದ ಬಾಲಕರ ವಸತಿ ನಿಲಯ, ಸರ್ಕಾರಿ ಬಾಲಕರ ಬಾಲಮಂದಿರ ಮತ್ತು ನಿರ್ಮಿತಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಶನಿವಾರ ದಿಢೀರ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಳಗ್ಗೆ ಇಲ್ಲಿನ ಟಕ್ಕೆಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಸಿದ ಅವರು, ನಿರಾಶ್ರಿತರಿಗಾಗಿ ಕಲ್ಪಿಸಿರುವ ವ್ಯವಸ್ಥೆ ಮತ್ತು ಒಳಾಂಗಣದಲ್ಲಿ ಬೆಳೆಸಿರುವ ಹಸರೀಕರಣ&ಪರಿಸರ ಪ್ರೆಗೆ ಸಾಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೈದ್ಯಕಿಯ ಸೌಲಭ್ಯ, ಆಹಾರ ಗುಣಮಟ್ಟ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿ, ನಿರಾಶ್ರಿತರಿಗೆ ಸಾಂಸತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಕುರಿತು ಕ್ರಮ ವಹಿಸುವಂತೆ ತಿಳಿಸಿದರು. ಅಲ್ಲದೆ, ನಿರಾಶ್ರಿತರ ಕೇಂದ್ರದ ಮುಂಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.ಕೇಂದ್ರದಲ್ಲಿರುವ ನಿರಾಶ್ರಿತರೊಂದಿಗೆ ಸಂವಾದ ನಡೆಸಿದ

ಜಿಲ್ಲಾಧಿಕಾರಿಗಳು, ತಮ್ಮಲ್ಲಿರುವ ಕೌಶಲ್ಯಕ್ಕೆ ತಕ್ಕಂತೆ ಶ್ರಮವಹಿಸುವ ಮೂಲಕ ಬದುಕಿಗೆ ದಾರಿ ಕಂಡುಕೊಳ್ಳಬೇಕು. ವ್ಯಸನಗಳ ದಾಸರಾಗದೇ ಸುಂದರ ಬದುಕು ರೂಪಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.

ನಂತರ ಅರಣ್ಯ ಇಲಾಖೆಗೆ ಭೇಟಿ ನೀಡಿ, ಅರಣ್ಯಾಧಿಕಾರಿಗಳ ನಿರ್ಮಾಣ ಹಂತದಲ್ಲಿರುವ ವಸತಿ ಸಮುಚ್ಛಯಗಳನ್ನು ವೀಸಿದ ಅವರು, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಇನ್ನು ಅದೇ ಆವರಣದಲ್ಲಿ ನಿರ್ಮಿಸುತ್ತಿರುವ ಅಲ್ಪಸಂಖ್ಯಾತ ಇಲಾಖೆಯ ಮೌಲಾನಾ ಆರದ ಮಾದರಿ ಶಾಲೆ ಕಟ್ಟಡವನ್ನು ಈ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸುವಂತೆ ಸೂಚಿಸಿದರು.

ಬಳಿಕ ಕೇಂದ್ರೀಯ ವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲಿಸಿ, ವಿದ್ಯಾಲಯದ ಆವರಣದಲ್ಲಿ ಹಸರೀಕರಣಕ್ಕಾಗಿ ಸಿಎಸ್​ಆರ್​ ಅನುದಾನದಡಿ ಅನುದಾನ ಒದಗಿಸಲು ಕ್ರಮ ವಹಿಸಲಾಗುವುದು. ಮಕ್ಕಳ ಕ್ರೀಡಾಂಗಣ, ಪೀಠೋಪಕರಣ&ಪಾಠೋಪಕರಣ ಬಗ್ಗೆ ಮಾಹಿತಿ ಪಡೆದು, ವಿದ್ಯಾಲಯದ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳುವಂತೆ ಹೇಳಿದರು.

ಅಲ್ಲಿಂದ ದೇವರಾಜ್​ ಅರಸು ಮೆಟ್ರಿಕ್​ ನಂತರದ ಬಾಲಕ ವಸತಿ ನಿಲಯಕ್ಕೆ ಭೇಟಿ ನೀಡಿ, ಅಲ್ಲಿ ಕಲ್ಪಿಸಲಾಗುತ್ತಿರುವ ಮೂಲ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಮಿಲಿಟರಿ ಬಾಲಕರ ವಸತಿ ನಿಲಯಕ್ಕೆ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆಗೆ ಅಗತ್ಯ ರೂಪರೇಷೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಬಳಿಕ ಬಾಲಕರ ಬಾಲಮಂದಿರಕ್ಕೆ ಭೇಟಿ ನೀಡಿ, ಬಾಲಮಂದಿರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗುಣಮಟ್ಟದ ಆಹಾರ ಒದಗಿಸಲು ಕ್ರಮ ವಹಿಸಿ ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೇರೆಪಿಸುವಂತೆ ಸೂಚಿಸಿದರು. ನಂತರ ನಿರ್ಮಿತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಲಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಗೋವಿಂದ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಿ.ಎನ್​. ಮಲಜಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಶಾಂತ ಪೂಜಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಾನಕಿ, ಪಾಲಿಕೆಯ ಪರಿಸರ ಅಭಿಯಂತರ ಅಶೋಕ ಸಜ್ಜನ, ಕೆ.ವಿ. ಪ್ರಾಚಾರ್ಯ ಜುಮನಾರಾಮ, ವಲಯ ಅರಣ್ಯಾಧಿಕಾರಿ ಸಂತೋಷ ಆಜೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net