

ಶ್ರೀನಿವಾಸಪುರ: ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಗುರುವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು.
ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ, ಸರ್ಕಾರ ಪ್ರಸ್ತುತ ನೀಡಿರುವ ಬೆಂಬಲ ಬೆಲೆ ಸ್ವಾಗತಾರ್ಹ. ಆದರೆ, 10 ಟನ್, 2 ಹೆಕ್ಟೇರ್ಗೆ ಬೆಂಬಲ ಬೆಲೆಯನ್ನು ನಿಗದಿಮಾಡಿರುವುದು ಸರಿಯಲ್ಲ. ಸದ್ಯ ಇರುವಂತಹ ಮಾವು ಫಸಲು ಅಲ್ಪಸ್ವಲ್ಪ. ಇರುವಂತಹ ಎಲ್ಲ ಮಾವಿಗೂ ಬೆಂಬಲ ಬೆಲೆ ಸಿಗಬೇಕು. ಯಾವುದೇ ಕಾರಣಕ್ಕೂ ರ್ನಿಬಂಧ ಹೇರಬಾರದು ಎಂದು ಒತ್ತಾಯಿಸಿದರು.
2018ರಲ್ಲಿ 5 ಹೆಕ್ಟೇರ್ 45 ಟನ್ಗೆ ಒಬ್ಬ ರೈತನಿಗೆ 1.20 ಲಕ್ಷ ರೂ. ನಿಗದಿ ಮಾಡಿ ಘೋಷಣೆ ಮಾಡಿದ್ದರು. ಆದರೆ, ರಾಜ್ಯ ಸರ್ಕಾರವೇ ಘೋಷಣೆ ಮಾಡಿದ್ದು. ಆದರೆ, ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಮತದೊಂದಿಗೆ ಬೆಂಬಲ ಬೆಲೆ ಘೋಷಿಸಿದ್ದು, ಇಂದು ಒಬ್ಬ ರೈತನಿಗೆ ಕೇವಲ 40 ಸಾವಿರ ರೂ. ಸಿಗುತ್ತಿದೆ. 5 ಎಕರೆ, 10 ಟನ್ ಗೆ ನಿಗದಿ ಮಾಡಿರುವುದು ಸರಿಯಲ್ಲ. ಮರುಪರಿಶೀಲಿಸಿ ರ್ನಿಬಂಧ ತೆಗೆಯಬೇಕು ಎಂದು ಒತ್ತಾಯಿಸಿದರು.
ಸರ್ಕಾರಕ್ಕೆ ಅಹವಾಲಿನ ಬಗ್ಗೆ ಪತ್ರ ಬರೆಯುವುದಾಗಿ ಡಿಸಿ ಆಶ್ವಾಸನೆ ನೀಡಿದರು. ಚಿಂತಾಮಣಿ, ಶ್ರೀನಿವಾಸಪುರ ರಸ್ತೆಯಲ್ಲಿ ಇರುವ ಕಲ್ಲೂರು ಗ್ರಾಮದ ಬಳಿ ಇರುವ ಮಾವು ಚೆಕ್ಪೋಸ್ಟ್ ಪರಿಶೀಲಿಸಿದರು. ಎಸ್ಪಿ ಬಿ.ನಿಖಿಲ್, ತೋಟಗಾರಿಕೆ ಉಪನಿರ್ದೇಶಕ ಕುಮಾರ್, ತಹಸೀಲ್ದಾರ್ ಜಿ.ಎನ್.ಸುಧೀಂದ್ರ, ಮಾವು ಬೆಳೆಗಾರರು ಇದ್ದರು.