

ಉಡುಪಿ: ಸರ್ಕಾರದ ಸುತ್ತೋಲೆಯ ಪ್ರಕಾರ ಭಾರತ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಸೆ.15ರಂದು ಬೆಳಗ್ಗೆ 10ಕ್ಕೆ ಅಜ್ಜರಕಾಡು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದು, ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಮಂದಿ ಭಾಗವಹಿಸುವ ನಿರೀೆ ಇದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ ಮೇಲುಸ್ತುವಾರಿಯಲ್ಲಿ ಉಡುಪಿ ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶೈಕ್ಷಣಿಕ ಸಂಸ್ಥೆಗಳು ಡಿಡಿಡಿ.ಠಿಜಛಿಟ್ಟಛಿಚಞಚ್ಝಿಛಿ-ಠಡಿಛಚ್ಟ.ಜ್ಞಿ ವೆಬ್ಸೈಟ್ನಲ್ಲಿ ನೊಂದಣಿ ಮಾಡಿ ಏಕಕಾಲದಲ್ಲಿ ಸಂವಿಧಾನ ಪೀಠಿಕೆ ಓದಬೇಕು. ಈ ಕಾಯೃಕ್ರಮದಲ್ಲಿ ಮಾಹೆ ಯುನಿರ್ವಸಿಟಿ, ಹಾಗೂ ನಿಟ್ಟೆ ಯುನಿರ್ವಸಿಟಿ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ, ವಿವಿಧ ಇಲಾಖೆ ಸರ್ಕಾರಿ, ಅರೆ ಸರ್ಕಾರಿ, ನಿಗಮ ಮಂಡಳಿಗಳು, ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಸಿಬ್ಬಂದಿ, ಸಾರ್ವಜನಿಕ ಸಂ ಸಂಸ್ಥೆಗಳು, ಜಿಲ್ಲೆಯಲ್ಲಿರುವ ಎಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು, ನೌಕರರು ಹಾಗೂ ಸಿಬ್ಬಂದಿ ಸೆ.12ರೊಳಗೆ ವೆಬ್ ಸೈಟ್ನಲ್ಲಿ ನೊಂದಣಿ ಮಾಡಿಕೊಳ್ಳಬೇಕು. ನಂತರ ಸಂವಿಧಾನ ಓದುವಿಕೆ ಪ್ರಕ್ರಿಯೆಯ ವಿಡಿಯೋ ಅಥವಾ ೋಟೋಗಳನ್ನು ಅದೇ ವೆಬ್ ಸೈಟ್ಗೆ ಅಪ್ಲೋಡ್ ಮಾಡಬೇಕು ಎಂದು ತಿಳಿಸಿದರು.
17ರಿಂದ ಅಯುಷ್ಮಾನ್ ಭವ ಯೋಜನೆ
ಕೇಂದ್ರ ಸರ್ಕಾರದ ಅಯುಷ್ಮಾನ್ ಭವ ಯೋಜನೆ ಅನ್ವಯ ಗ್ರಾಮಮಟ್ಟದಲ್ಲಿ ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆ.17ರಂದು ಜಿಲ್ಲೆಯಾದ್ಯಂತ ಆಯುಷ್ಮಾನ್ ಕಾರ್ಡ್ಗಳನ್ನು ಮನೆಮನೆಗಳಿಗೆ ತಲುಪಿಸಲಾಗುವುದು. ಸೆ.19ರಿಂದ 4 ಮಂಗಳವಾರ ಪ್ರತಿ ಸಮುದಾಯ ಅರೋಗ್ಯ ಕೇಂದ್ರ ಹಾಗೂ ಕ್ಷೇಮ ಕೇಂದ್ರಗಳಲ್ಲಿ ಆಯುಷ್ಮಾನ ಮೇಳ ನಡೆಯಲಿದೆ. ಮೊದಲ ಮಂಗಳವಾರ ಬಿಪಿ, ಶುಗರ್, ಇಸಿಜಿ ಪರೀೆ ಇರಲಿದೆ. 2ನೇ ಮಂಗಳವಾರ ಕ್ಷಯರೋಗ, ಕುಷ್ಠರೋಗ, ಡೆಂ ಮೊದಲಾದ ಸಾಂಕ್ರಾಮಿಕ ರೋಗ ತಪಾಸಣೆ, 3ನೇ ಮಂಗಳವಾರ ತಾಯಿ ಮತ್ತು ಮಕ್ಕಳ ಆರೋಗ್ಯ ತಪಾಸಣೆ, 4ನೇ ಮಂಗಳವಾರ ಕಣ್ಣಿನ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಅ.2 ಗಾಂಧಿ ಜಯಂತಿಯಂದು ಅಯುಷ್ಮಾನ ಸಭಾ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಗ್ರಾಮ ಸಭೆ, ನಗರಪ್ರದೇಶದಲ್ಲಿ ವಾರ್ಡ ಸಭೆ ನಡೆಸಿ, ಅರೋಗ್ಯ ಮಾಹಿತಿ, ರಕ್ತದಾನ ಶಿಬಿರ, ಆಂಗಾಂಗ ದಾನ ಜಾಗೃತಿ, ಸ್ವಚ್ಛತಾ ಅಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಾರ್ಕಳ ಮತ್ತು ಬ್ರಹ್ಮಾವರ ತಾಲೂಕಿನಲ್ಲಿ ಮಳೆ ಣವಾಗಿರುವುದರಿಂದ ಬರಪೀಡೀತ ತಾಲೂಕು ಎಂಬುದಾಗಿ ಘೋಷಣೆಗೆ ಮುನ್ನ ತಜ್ನರ ತಂಡದಿಂದ ಅಗತ್ಯ ಪರಿಶೀಲನೆ ನಡೆಯುತ್ತಿದೆ. ಅವರ ವರದಿ ಆಧಾರದಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.
ಇಎಸ್ಐ ಅಸ್ಪತ್ರೆ ನಿರ್ಮಾಣಕ್ಕೆ ಕೇಂದ್ರ ಕಾರ್ಮಿಕ ಇಲಾಖೆ ಅಧಿಕಾರಿಗಳ ತಂಡ ವಾರಂಬಳ್ಳಿಯಲ್ಲಿ 5 ಎಕ್ರೆ ಜಾಗಪರಿಶೀಲನೆ ನಡೆಸಿದೆ. ಆರ್ಧ ಎಕ್ರೆ ಹೆಚ್ಚುವರಿಯಾಗಿ ಕೇಳಿದ್ದಾರೆ. ಕೊಟ್ಟಿದ್ದೇವೆ ಎಂದು ಹೇಳಿದರು. ಜಿಪಂ ಸಿಇಒ ಪ್ರಸನ್ನ ಎಚ್., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕಿ ಅನಿತಾ ಮುಡ್ಲೂರು, ಡಿವೈಎಸ್ಪಿ ದಿನಕರ್ ಉಪಸ್ಥಿತರಿದ್ದರು.