ಲಿಖಿತ ಪರೀಕ್ಷೆ, ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಆದೇಶ

Published on

ವಿಜಯಪುರ: ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೂ. 15 ರಿಂದ 17ರ ವರೆಗೆ ನಡೆಯಲಿರುವ ಪ್ರಸಕ್ತ 2024&25ನೇ ಸಾಲಿನ ರಾಜ್ಯ ಪ್ರಾಥಮಿಕ ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರುಗಳ ತತ್ಸಮಾನ ವೃಂದದ ರ್ನಿದಿಷ್ಟಪಡಿಸಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ಕೇಂದ್ರ ವ್ಯಾಪ್ತಿಯ 200 ಮೀ ವ್ಯಾಪ್ತಿಯಲ್ಲಿ ನಿಷೇಧಾೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಆದೇಶ ಹೊರಡಿಸಿದ್ದಾರೆ.

ಬೆಳಗ್ಗೆ 9 ರಿಂದ ಪರೀಕ್ಷೆ ಮುಗಿಯುವವರೆಗೂ ನಿಷೇಧಾೆ ಮುಂದುವರಿಯಲಿದೆ. ಪರೀಕ್ಷೆ ಕೇಂದ್ರ ಬಳಿಯ ಝರಾಕ್ಸ್​ ಅಂಗಡಿ, ಕಂಪ್ಯೂಟರ್​ ಸೆಂಟರ್​, ಸೈಬರ್​ ಕೆಫೆ, ಕೋಚಿಂಗ್​ ಕೇಂದ್ರಗಳು ಪರೀಕ್ಷೆ ವೇಳೆಯಲ್ಲಿ ತೆರೆಯದಂತೆ ಸೂಚಿಸಲಾಗಿದೆ. ಅಲ್ಲದೆ, ಪರೀಕ್ಷೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ಇತರರು ಮೊಬೈಲ್​ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net