ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ಡಿಸಿ ಆದೇಶ

CCC
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಪಂ ಸದಸ್ಯ ಸ್ಥಾನಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಯ ಬಂದೂಕು ಪರವಾನಗಿ ಪಡೆದಿರುವ ನಾಗರಿಕರು ತಮ್ಮ ಬಳಿಯಿರುವ ಎಸ್‌ಬಿಎಂಎಲ್,ಎಸ್‌ಬಿಬಿಎಲ್,ಡಿಬಿಬಿಎಲ್,ಡಿಬಿಎಂಎಲ್, ರಿವಾಲ್ವಾರ್ ಹಾಗೂ ಪಿಸ್ತೂಲ್ ಇತ್ಯಾದಿಗಳನ್ನು ಪೊಲೀಸ್ ವಶಕ್ಕೆ ಒಪ್ಪಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದಾರೆ.

bತ್ರದುರ್ಗ,ಹೊಳಲ್ಕೆರೆ,ಹೊಸದುರ್ಗ,ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಗೊಳಿಸಲಾಗುವುದು ಹಾಗೂ ಚುನಾವಣ್ನೆ ಸುಸೂತ್ರ ನಡೆಸಲು ಮತ್ತು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಪರವಾನಗಿದಾರರ ಶಸ್ತ್ರಾಸ್ತ್ರ ಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸಬೇಕು.

ಈ ಆದೇಶವು ನಗರಸಭೆ,ಪುರಸಭೆ,ಪಪಂ ವ್ಯಾಪ್ತಿ ಹಾಗೂ ಬ್ಯಾಂಕ್,ಕೇಂದ್ರ ಹಾಗೂ ರಾಜ್ಯ ಒಡೆತನದ ಸಂಸ್ಥೆಗಳ ಶಸ್ತ್ರಾಸ್ತ್ರಗಳಿಗೆ ಅನ್ವಯಿಸು ವುದಿಲ್ಲ. ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದ ಪರವಾನಗಿದಾರರಿಗೆ ಸೂಕ್ತ ರಶೀದಿ ನೀಡಬೇಕು. ನೀತಿ ಸಂಹಿತೆ ಮುಕ್ತಾಯವಾಗುವವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ಡಿಸಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net