ಮತದಾನದ ದಿನ ಸಂತೆ ಮುಂದೂಡಿಕೆ

Published on

ಹಾವೇರಿ: ಮೇ 10ರಂದು ರಾಜ್ಯದಲ್ಲಿ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಅಂದು ಜಿಲ್ಲೆಯಲ್ಲಿ ನಡೆಯುವ ಎಲ್ಲ ಸಂತೆಗಳನ್ನು ಮುಂದೂಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ಆದೇಶ ಹೊರಡಿಸಿದ್ದಾರೆ.
ಹಾನಗಲ್ಲ ಕ್ಷೇತ್ರದ ಮುಳಥಳ್ಳಿ, ಹಿರೇಬಾಸೂರು, ಶಿಗ್ಗಾಂವಿ ಕ್ಷೇತ್ರದ ಶಿಗ್ಗಾಂವಿ ಹಾಗೂ ಹತ್ತಿಮತ್ತೂರು, ಹಾವೇರಿ ಕ್ಷೇತ್ರದ ಹೊಸರಿತ್ತಿ, ಬೆಳವಿಗಿ, ರಾಮಾಪುರ, ಅಗಡಿ ಹಾಗೂ ಹಾವೇರಿ, ಬ್ಯಾಡಗಿ ಕ್ಷೇತ್ರದ ದೇವರಗುಡ್ಡ, ಕಲ್ಲೇದೇವರ, ಬ್ಯಾಡಗಿ, ಸಂಗೂರ, ಹಿರೇಕೆರೂರು ಕ್ಷೇತ್ರದ ಚಿಕ್ಕೇರೂರ, ರಾಣೇಬೆನ್ನೂರ ಕ್ಷೇತ್ರದ ತುಮ್ಮಿನಕಟ್ಟಿ ಗ್ರಾಮಗಳಲ್ಲಿ ನಡೆಯುವ ಸಂತೆಯನ್ನು ಮುಂದೂಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net