

ಗದಗ: ಪ್ರತಿಯೊಬ್ಬರಿಗೂ ಸಂವಿಧಾನದ ಪೀಠಿಕೆಯ ಕುರಿತು ತಿಳುವಳಿಕೆ ಇರುವುದು ಅಗತ್ಯವಾಗಿದೆ ಎಂದು ಕೇರಳದ ಲೋಕಲ್ ಸೆಲ್ಫ ಗವರ್ನಮೆಂಟ್‍ನ ಜಂಟಿ ನಿರ್ದೇಶಕ ಸುದೇಶನ ಅವರು ತಿಳಿಸಿದರು.
ಗದಗ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಇವರ ಸಹಯೋಗದಲ್ಲಿ ಸಂವಿಧಾನದ ಪೀಠಿಕೆ ಹಾಗೂ ಆಶಯಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಬುಧವಾರದಂದು ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲಿನಲ್ಲಿ ಸಂವಿಧಾನದ ಪೀಠಿಕೆಯ ಹಾಗೂ ಆಶಯ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇರಳ ರಾಜ್ಯದ ಕೋಳಂ ಜಿಲ್ಲೆಯಲ್ಲಿ ಪ್ರತಿ ಮನೆಗಳಿಗೆ ಸಂವಿಧಾನವನ್ನು ತಿಳಿಸಿ ಸಂವಿಧಾನದ ಸಾಕ್ಷರತೆಯನ್ನು ಸಾಧಿಸಿದ ಏಕೈಕ ಜಿಲ್ಲೆಯಾಗಿದೆ. ನಮ್ಮ ದೇಶದಲ್ಲಿ ಗದಗ ಜಿಲ್ಲೆಯಲ್ಲಿ ಸಂವಿಧಾನದ ಸಾಕ್ಷರತೆಯನ್ನು ಸಾಧಿಸಿ ಕರ್ನಾಟಕದಲ್ಲಿ ಪ್ರಥಮ ಸ್ಥಾನದಲ್ಲಿರಬೇಕು. ಇಡೀ ಭಾರತ ದೇಶಕ್ಕೆ ಸ್ಪೂರ್ತಿಕೊಡುವಂತಹದ್ದಾಗ ಬೇಕು. ಹತ್ತು ವರ್ಷದ ಮಕ್ಕಳಿಂದ ಎಲ್ಲಾ ವಯಸ್ಸಿನವರಿಗೂ ಸಂವಿಧಾನದ ಪೀಠಿಕೆಯ ಬಗ್ಗೆ ತಿಳಿದಿರಬೇಕು ಎಂದರು.
ಸಂವಿಧಾನದ ಜಾರಿಯಾದ ನಂತರ ಎಲ್ಲರಿಗೂ ಘನತೆ ಹಾಗೂ ವ್ಯಕ್ತಿತ್ವ ತಂದು ಕೊಟ್ಟಿತು, ಅದಕ್ಕಾಗಿ ಸಂವಿಧಾನವು ನಮ್ಮದು ಎನ್ನುವ ಮನೋಭಾವವನ್ನು ನಾವೆಲ್ಲರೂ ಹೊಂದಬೇಕು. ಇದರ ವೈಶಿಷ್ಟ್ಯಗಳು ನಮಗೆಲ್ಲ ಗೌರವ ತಂದುಕ್ಕೊಟ್ಟಿದಕ್ಕಾಗಿ ಈ ಸಂವಿಧಾನದ ಪ್ರಣಾಳಿಕೆಯನ್ನು ಭಾರತದ ಪ್ರತಿಯೊಬ್ಬರೂ ಅರಿತುಕೊಳ್ಳಬೇಕೆಂದರು.
ಸಂವಿಧಾನವನ್ನು ಸಾಮಾಜಿಕವಾಗಿ ಮತ್ತು ಸಾರ್ವಜನಿಕ ಸಂಘಸಂಸ್ಥೆಗಳಲ್ಲಿ ಆಚರಿಸಬೇಕು. ಸರ್ಕಾರಿ ಶಾಲೆ, ಕಚೇರಿ ಹಾಗೂ ಸಂಸ್ಥೆಗಳಲ್ಲಿ , ಮನೆ ಮನೆಗಳಲ್ಲಿ ಸಂವಿಧಾನದ ಪೀಠಿಕೆಯ ಕಿರು ಪುಸ್ತಕವನ್ನು ಇಡಬೇಕು ಎಂದರು. ಸಂವಿಧಾನ ನಮಗೆ ಗೌರವ, ಘನತೆ,ಸ್ಥಾನಮಾನ, ಅಧಿಕಾರವನ್ನು ಕೊಟ್ಟಿದೆ. ಈ ಸಂವಿಧಾನದಿಂದ ಅನೇಕ ಜನ ತಮ್ಮ ಅಮೂಲ್ಯವಾದ ಜೀವನವನ್ನು ಜೈಲಿನಲ್ಲಿ ಕಳೆದಿದ್ದಾರೆ. ಜನ ಬ್ರಿಟಿಷ್‍ರ ಲಾಠಿ ಏಟು ಹಾಗೂ ಗುಂಡೇಟಿಗಳೀಗೆ ತಮ್ಮ ಪ್ರಾಣವನ್ನು ತ್ಯಾಗಮಾಡಿದ್ದಾರೆ. ತ್ಯಾಗದ ಪ್ರತಿಫಲವಾಗಿ ಇಂದು ಭಾರತೀಯರಾದ ಸಂವಿಧಾನ ಪೀಠಿಕೆಯನ್ನು ಹೊಂದಲು ಸಾಧ್ಯವಾಯಿತು. ಮೂಲಭೂತ ತತ್ವಗಳಾದ ಸಮಾನತೆ, ಸ್ವಾತಂತ್ರ್ಯ, ಮತ್ತು ಅನುಕಂಪ ಇವು ಮೂರು ಪೀಠಿಕೆಯಲ್ಲಿ ಇವೆ. ಈ ಮೂರು ತತ್ವಗಳು ನಮ್ಮ ಬದುಕನ್ನು ರೂಪಿಸಿಕೊಟ್ಟಿದೆ. ಸಂವಿಧಾನ ರಚನೆಗೂ ಮುನ್ನ ಜಗತ್ತಿನ ಶ್ರೇಷ್ಠ ಸಂವಿಧಾನಗಳ ಅಧ್ಯಯನಮಾಡಿ ನಮ್ಮ ಸಂವಿಧಾನವನ್ನು ರಚಿಸಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ ಸಂವಿಧಾನವೇ ನಮ್ಮ ಉಸಿರು. ಇದು ಎಲ್ಲರಿಗೂ ಸ್ವತಂತ್ರವಾಗಿ ಬದುಕಲು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ನಮ್ಮ ದೇಶದಲ್ಲಿ ವಿದ್ಯಾಭ್ಯಾಸ, ಸರ್ಕಾರಿ ಕೆಲಸ, ರಾಜಕೀಯ ಮತ್ತು ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಆಧ್ಯತೆ ನೀಡಿರುವುದು ನಮ್ಮ ಸಂವಿಧಾನದಿಂದಲೇ. ಕೇರಳ ರಾಜ್ಯದ ಕೋಳಂ ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಗದಗ ಜಿಲ್ಲೆಯಲ್ಲಿ ಪ್ರತಿಯೊಂದು ಮನೆ ಮನೆಯಲ್ಲಿ ಸಂವಿಧಾನ ಪೀಠಿಕೆಯ ಕಿರು ಪುಸ್ತಕವನ್ನು ಪ್ರತಿದಿನ ಜಿಲ್ಲೆಯ ಜನರು ಹೆಚ್ಚಿನ ಪ್ರಮಾಣದಲ್ಲಿ ಓದುವುದರಿಂದ ನಮ್ಮ ಜಿಲ್ಲೆ ರಾಜ್ಯಕ್ಕೆ ಪ್ರಥಮಸ್ಥಾನ ಪಡೆಯುವ ಹಾಗೆ ಆಗಬೇಕೆಂದು ಜಿಲ್ಲಾಧಿಕಾರಿಗಳು ಅಭಿಪ್ರಾಯ ವ್ಯಕ್ತ ಪಡಿಸಿದರು.
ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ನಂತರ ಸಂವಿಧಾನದ ಪೀಠಿಕೆಯ ಕುರಿತು ಪ್ರತಿಜಾ ವಿಧಿ ಭೋದಿಸಲಾಯಿತು. ಹುಲಕೋಟಿಯ ಸಹಕಾರ ರೇಡಿಯೋ ನಿರ್ದೇಶಕರಾದ ಜೆ.ಕೆ.ಜಮಾದರ ಅವರು ಸಂವಿಧಾನದ ಉಪನ್ಯಾಸವನ್ನು ಕನ್ನಡ ಭಾಷೆಗೆ ಅನುವಾದ ಮಾಡಿದರು.
ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರ ಸಭೆ ಅದ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಮಾಜಿ ಶಾಸಕ ಡಿ.ಆರ್.ಪಾಟೀಲ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಮಣಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರವಿ ಗುಂಜೀಕರ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಇಲಾಖೆಯ ಸಹಾಯಕ ನಿರ್ದೇಶಕ ಮಹಾಂತೇಶ.ಕೆ. ನಗರಸಭೆ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.