ಇನ್ನೇರೆಡು ದಿನಗಳಲ್ಲಿ ಅಕ್ಕಿ ನಗದು ಜಮೆ: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​

12GDG08
Published on

ಗದಗ: ಅನ್ನಭಾಗ್ಯ ಯೋಜನೆಯಡಿ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ. ಅಕ್ಕಿ, ಹೆಚ್ಚುವರಿ 5 ಕೆ.ಜಿ. ಅಕ್ಕಿಯ ನಗದನ್ನು ನೇರವಾಗಿ ಲಾನುಭವಿಗಳ ಖಾತೆಗೆ ವರ್ಗಾವಣೆ ಪ್ರಕ್ರಿಯೆ ಜಿಲೆಯಲ್ಲಿ ಆರಂಭವಾಗಿದ್ದು ಇನ್ನೆರೆಡು ದಿನಗಳಲ್ಲಿ ಅರ್ಹ ಲಾನುಭವಿಗಳೆಲ್ಲರಿಗೂ ನಗದು ಜಮೆ ಆಗಲಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​. ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಅನ್ನಭಾಗ್ಯ ಯೋಜನೆಯ ಅನುಷ್ಠಾನ ಕುರಿತಂತೆ ಪಡಿತರ ಅಂಗಡಿಗಳ ಮಾಲೀಕರು, ಆಹಾರ ಇಲಾಖೆಯ ನೀರಿಕರು, ಶಿರಸ್ತೇದಾರರ ಸಭೆಯ ಅಧ್ಯತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಅರ್ಹ ಲಾನುಭವಿಗಳೆಲ್ಲರಿಗೂ ಸರ್ಕಾರದ ಸೌಲಭ್ಯ ದೊರಕಬೇಕು. ಈ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆಯ ಜಿಲ್ಲೆಯ ಎಲ್ಲ ಲಾನುಭವಗಳಿಗೂ ನಗದು ವರ್ಗಾವಣೆಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಪಡಿತರ ಕಾರ್ಡುದಾರರು ಈ&ಕೆವೈಸಿ ಮಾಡಿಸಿದರ ಕುರಿತು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಈ&ಕೆವೈಸಿ ಮಾಡಿಸದೇ ಇದ್ದಲ್ಲಿ ತಣವೇ ಈ&ಕೆವೈಸಿ ಕಾರ್ಯ ರ್ಪೂಣಗೊಳಿಸಬೇಕು. ಪಡಿತರ ಕಾಡಿರ್ನಲ್ಲಿರುವ ಸದಸ್ಯರು ಬ್ಯಾಂಕ್​ ಅಥವಾ ಅಂಚೇ ಕಚೇರಿಯಲ್ಲಿ ಖಾತೆ ಹೊಂದಿರಬೇಕು. ಪಡಿತರ ನಗದು ವರ್ಗಾವಣೆಗೆ ತಾಂತ್ರಿಕ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಎಲ್ಲ ಪ್ರಕ್ರಿಯೆಯನ್ನು ರ್ಪೂಣಗೊಳಿಸಲು ಸೂಚಿಸಿದರು.
ಆಹಾರ ಇಲಾಖೆ ಉಪನಿರ್ದೇಶಕ ಗಂಗಪ್ಪ ಎಂ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 2.56 ಲಕ್ಷ ಬಿಪಿಎಲ್​ ಹಾಗೂ ಅಂತೋದಯ ಪಡಿತರ ಚೀಟಿದಾರರಿದ್ದಾರೆ. ಈ ಪೈಕಿ 6800 ಪಡಿತರ ಕಾಡಿರ್ನ ಮುಖ್ಯಸ್ಥರ ಖಾತೆ ಕ್ರಿಯಾಶೀಲವಾಗಿಲ್ಲ, 20800 ಪಡಿತರ ಸದಸ್ಯರು ಬ್ಯಾಂಕ್​ ಅಥವಾ ಅಂಚೇ ಕಚೇರಿಯಲ್ಲಿ ಖಾತೆ ಹೊಂದಿರುವುದಿಲ್ಲ, 1200 ಪಡಿತರ ಪಡಿತರ ಚೀಟಿದಾರರ ಮುಖ್ಯಸ್ಥರು ಯಾರೆಂಬುದು ಇನ್ನೂ ನಿರ್ಣಯವಾಗಿಲ್ಲ. 215 ಲಾನುಭವಿಗಳ ಆಧಾರ ಕಾರ್ಡಗಳ ವಿವರ ಮಾನ್ಯವಾಗಿಲ್ಲ. ಈ ಕುರಿತು ಈ ಎಲ್ಲ ನ್ಯೂನತೆಗಳನ್ನು ಜು.20ರ ಒಳಗಾಗಿ ಹತ್ತಿರದ ಪಡಿತರ ಕೇಂದ್ರ ಅಥವಾ ಆಹಾರ ನೀರಿಕರ ಕಚೇರಿಗಳಿಗೆ ಭೇಟಿ ಮಾಡಿ ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ ಎಂದರು.
ಜಿಲ್ಲೆಗೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ.ಅಕ್ಕಿಯ ಬದಲಾಗಿ ನಗದು ವರ್ಗಾವಣೆಗಾಗಿ ಒಟ್ಟು 12.46 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 188000 ಪಡಿತರ ಮುಖ್ಯಸ್ಥರಿಗೆ ಡಿಬಿಟಿ.ಮೂಲಕ ನಗದು ವರ್ಗಾವಣೆ ಮಾಡಲು ಮಾಹಿತಿ ಸಂಗ್ರಹಿಸಿ ನಗದು ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಗಂಗಪ್ಪ ಹೇಳಿದರು.
ಸಭೆಯಲ್ಲಿ ಅಂಚೆ ಕಚೇರಿಯ ಅಧಿಕಾರಿ ಆನಂದ ಸಾಗರ, ಆಹಾರ ಇಲಾಖೆಸಹಾಯ ನಿರ್ದೇಶಕಿ ಗೀರಿಜಮ್ಮ ಹಿರೇಮಠ ಸೇರಿದಂತೆ ತಾಲೂಕುಗಳ ಆಹಾರ ನೀರಿಕರು, ಶಿರೇಸ್ತೆದಾರರು, ಪಡಿತರ ಅಂಗಡಿಗಳ ಮಾಲೀಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net