ರಾಜಹಂಸಗಡ ಕೋಟೆ ಪ್ರವೇಶ ನಿರ್ಬಂಧ

IMG-20230319-WA0007.jpg
Published on


ಬೆಳಗಾವಿ: ತಾಲೂಕಿನ ರಾಜಹಂಸಗಡ ಕೋಟೆ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವ ಹಿನ್ನೆಲೆ ಮಾ.21ರಿಂದ ಮೇ 4ರವರೆಗೆ ಸಾರ್ವಜನಿಕರು, ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.
 ರಾಜಹಂಸಗಡ ಕೋಟೆ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಒಂದಾದ ರಸ್ತೆಯಲ್ಲಿ ಗ್ರಾೃನೈಟ್ ಕಲ್ಲು ಹಾಸು ಪೂರ್ಣಗೊಳಿಸಲು 15 ದಿನಗಳ ಕಾಲ ಅವಶ್ಯಕತೆಯಿದೆ. ಆದರೆ, ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಜನರು ಆಗಮಿಸುತ್ತಿರುವ ಹಿನ್ನೆಲೆ ಕಾಮಗಾರಿ ವ್ಯವಸ್ಥಿತ ರೀತಿಯಲ್ಲಿ ಮಾಡಲು ಕಷ್ಟವಾಗುತ್ತಿದೆ ಹಾಗಾಗಿ 15 ದಿನಗಳ ಕಾಲ ಜನರ ಪ್ರವೇಶ ನಿರ್ಬಂಧಿಸುವಂತೆ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ವಿನಿಂತರಿಸಿದ್ದಾರೆ. ಹಾಗಾಗಿ ಕಾಮಗಾರಿ ಹಿತದೃಷ್ಟಿಯಿಂದ ಕೋಟೆ ಪ್ರವೇಶ ನಿರ್ಬಂಧಿಸಿದ್ದು, ಜನರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net