

ಕೊಪ್ಪಳ: ತಂಬಾಕು ಸೇವನೆ ಜೀವಕ್ಕೆ ಹಾನಿಕಾರ. ಜಿಲ್ಲಾದ್ಯಂತ ತಂಬಾಕು ನಿಯಂತ್ರಣ ಕಾರ್ಯಕ್ರಮ ಅಚ್ಚುಕಟ್ಟಾಗಿ ಹಮ್ಮಿಕೊಳ್ಳಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಪಂಚದಲ್ಲಿ ಪ್ರತಿ ವರ್ಫಿ ಸರಾಸರಿ 70ಲಕ್ಷ ಜನರು ತಂಬಾಕಿನಿಂದ ಉಂಟಾದ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ತಂಬಾಕು ಸೇವಮೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿ ಕಾಯಿಲೆ ಬರುತ್ತವೆ. ಇದರಿಂದ ಪ್ರತಿ ಆರು ಸೆಕೆಂಡ್ ಗೆ ಒಬ್ಬರು ಮೃತಪಡುತ್ತಿದ್ದಾರೆ. ಜನರಿಗೆ ತಂಬಾಕಿನಿಂದಾಗುವ ದುಫ್ಪಿರಿಣಾಮ ಕುರಿತು ಅರಿವು ಮೂಡಿಸಿ. ತಂಬಾಕು ನಿಯಂತ್ರಣ ಕಾನೂನು ಕಟ್ಟುನಿಟ್ಟಾಗಿ ಜಾರಿ ಮಾಡಿ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷಿದ್ಧ. ತಂಬಾಕು ಉತ್ಪನ್ನಗಳಿಗೆ ನೇರ, ಪರೋಕ್ಷ ಜಾಹೀರಾತು ನೀಡುವಂತಿಲ್ಲ. ಅಪ್ರಾಪ್ತರಿಗೆ ತಂಬಾಕು ಉತ್ಪನ್ನ ನೀಡುವಂತಿಲ್ಲ. ಈ ಬಗ್ಗೆ ಜಾಗೃತಿ ಕೈಗೊಳ್ಳಿ ಎಂದು ನಿರ್ದೇಶಿಸಿದರು.
ತಂಬಾಕು ನಿಯಂತ್ರಣ ಜಾಗೃತಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಎಸ್ ದರಗದ, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಎಸ್ಪಿ ಹೇಮಂತ್ ಕುಮಾರ್, ಡಿಎಚ್ಡಾ.ಟಿ.ಲಿಂಗರಾಜು, ಆರ್ ಸಿಎಚ್ ಅಧಿಕಾರಿ ಡಾ.ವಿ.ಪ್ರಕಾಶ, ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್., ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್, ಡಾ.ಶಶಿಧರ, ಡಾ.ವೆಂಕಟೇಶ ಇತರರಿದ್ದರು.