

ಕೊಪ್ಪಳ: ಜಿಲ್ಲೆಯಲ್ಲಿ ಏಡ್ಸ್ನಿಂದ ಸಂಭವಿಸುವ ಸಾವಿನ ಪ್ರಮಾಣ ಸೊನ್ನೆಗೆ ತರುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಏಡ್ಸ್ ನಿಯಂತ್ರಣ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಚ್ಐವಿ ಹರಡುವಿಕೆ ನಿಯಂತ್ರಿಸಿ. ಬಾಧಿತರಿಗೆ ಆರೈಕೆ, ಬೆಂಬಲ ನೀಡುವ ಸೌಲಭ್ಯ ಕಲ್ಪಿಸಿ. ಕಳಂಕ ಮತ್ತು ತಾರತಮ್ಯ ನೀತಿ ಕೊನೆಗಾಣಿಸಿ. ಎಚ್ಐವಿ ಬಾಧಿತರು, ಅವರ ಕುಟುಂಬಸ್ಥರಿಗೆ ಸಹಕಾರ ನೀಡಿ. ಆಪ್ತಸಮಾಲೋಚನೆ, ಸೇವೆ, ಔಷೋಧಪಚಾರ, ಟಿ.ಬಿ.ಚಿಕಿತ್ಸೆ ಸಮರ್ಪಕವಾಗಿ ನೀಡಲು ತಾಕೀತು ಮಾಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಶಶಿಧರ ಎ. ಮಾತನಾಡಿ, 2021&22ರಲ್ಲಿ ಸಾಮಾನ್ಯ ಜನರಲ್ಲಿ ಶೇ. 0.52, ಗರ್ಭಿಣಿಯರಲ್ಲಿ ಶೇ.0.06 ರಷ್ಟು ಎಚ್ಐವಿ ಕಾಣಿಸಿಕೊಂಡಿದೆ. 2022&23ರಲ್ಲಿ ಸಾಮಾನ್ಯರಲ್ಲಿ ಶೇ. 0.51, ಗರ್ಭಿಣಿಯರಲ್ಲಿ 0.03, 2023&24ರಲ್ಲಿ ಸಾಮಾನ್ಯರಲ್ಲಿ ಶೇ.0.38, ಗರ್ಭಿಣಿಯರಲ್ಲಿ 0.05ಪಾಸಿವಿಟಿ ಕಂಡುಬಂದಿದೆ. ಸೋಂಕಿತರಿಗೆಲ್ಲ ಉಚಿತ ಆಪ್ತ ಸಮಾಲೋಚನೆ, ಎ.ಆರ್.ಟಿ.ಚಿಕಿತ್ಸೆ, ಗರ್ಭಿಣಿಯರು, ಹುಟ್ಟುವ ಮಕ್ಕಳಿಗೆ 18 ತಿಂಗಳವರೆಗೆ ಾಲೋಅಪ್ ಮಾಡಲಾಗುತ್ತಿದೆ ಎಂದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಎಸ್ಪಿ ಹೇಮಂತ್ ಕುಮಾರ್, ಡಿಎಚ್ಒ ಡಾ.ಟಿ.ಲಿಂಗರಾಜು, ಆರ್ಸಿಎಚ್ ಅಧಿಕಾರಿ ಡಾ.ಪ್ರಕಾಶ ವಿ., ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ, ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ಕುಷ್ಠರೋಗ ನಿಮೂರ್ಲನಾಧಿಕಾರಿ ಡಾ.ಪ್ರಕಾಶ ಎಚ್., ಡಾ.ವೆಂಕಟೇಶ ಇತರರಿದ್ದರು.