ಲೋಕಸಭಾ ಚುನಾವಣೆಗೆ ದಿನಗಣನೆ: ಮಂಡ್ಯ ಜಿಲ್ಲಾಡಳಿತ ಅಲರ್ಟ್

DC meeting regarding Lok Sabha election mandya
Published on

ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆಂದು ಸ್ಥಾಪಿಸಲಾಗುವ ಮತಗಟ್ಟೆಗಳನ್ನು ಪರಿಶೀಲಿಸಿ ಕನಿಷ್ಟ ಮೂಲ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 272, ಮದ್ದೂರಿನಲ್ಲಿ 254, ಮೇಲುಕೋಟೆಯಲ್ಲಿ 264, ಮಂಡ್ಯದಲ್ಲಿ 262, ಶ್ರೀರಂಗಪಟ್ಟಣದಲ್ಲಿ 249, ನಾಗಮಂಗಲದಲ್ಲಿ 260, ಕೆ.ಆರ್.ಪೇಟೆಯಲ್ಲಿ 264 ಹಾಗೂ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 252 ಸೇರಿದಂತೆ 2074 ಮತಗಟ್ಟೆ ಒಳಗೊಂಡಿದೆ. ಈ ಎಲ್ಲವೂ ಮತಗಟ್ಟೆಗೆ ಕಟ್ಟಡ ಸುಸ್ಥಿತಿಯಲ್ಲಿರುವುದು ಸೇರಿದಂತೆ ಕುಡಿಯುವ ನೀರು, ಅಗತ್ಯ ಪೀಠೋಪಕರಣ, ವಿದ್ಯುತ್, ರ‌್ಯಾಂಪ್, ಶೌಚಗೃಹ ವ್ಯವಸ್ಥೆಯನ್ನು ಪರಿಶೀಲಿಸಬೇಕು ಎಂದರು.

ಚುನಾವಣೆಗೆ ಸಂಬಂಧಿಸಿದಂತೆ ಮಳವಳ್ಳಿ ಕ್ಷೇತ್ರಕ್ಕೆ 18, ಮದ್ದೂರಿಗೆ 18, ಮೇಲುಕೋಟೆಯಲ್ಲಿ 17, ಮಂಡ್ಯದಲ್ಲಿ 20, ಶ್ರೀರಂಗಪಟ್ಟಣದಲ್ಲಿ 17, ನಾಗಮಂಗಲದಲ್ಲಿ 19, ಕೆ.ಆರ್.ಪೇಟೆಯಲ್ಲಿ 18 ಹಾಗೂ ಕೃಷ್ಣರಾಜನಗರ ಕ್ಷೇತ್ರದಲ್ಲಿ 17 ಸೇರಿದಂತೆ ಒಟ್ಟು 144 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅದರಂತೆ ಅವರು ತಮ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲ ವ್ಯವಸ್ಥೆಗಳನ್ನು ಪರಿಶೀಲಿಸಿ ಸಹಾಯಕ ಚುನಾವಣಾಧಿಕಾರಿಗೆ ವರದಿ ನೀಡುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಎಎಸ್ಪಿ ತಿಮ್ಮಯ್ಯ, ಮುಡಾ ಆಯುಕ್ತೆ ಐಶ್ವರ್ಯಾ, ಪಾಂಡವಪುರ ಎಸಿ ನಂದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net