ಜಿಲ್ಲಾಡಳಿತದಿಂದ ನೇಕಾರ ಸಮುದಾಯಕ್ಕೆ ಅಗೌರವ?

IMG-20230328-WA0011
Published on

ಗದಗ: ವಚನಕಾರ ದೇವರ ದಾಸಿಮಯ್ಯನವರ ಜಯಂತಿಗೆ ಸಂಬಂಧಿಸಿದಂತೆ ಮಾ. 26 ರಂದು ಸಂಜೆ 4.30ಕ್ಕೆ ಗದಗ ಜಿಲ್ಲಾಡಳಿತದಲ್ಲಿ ಕರೆದ ಪೂರ್ವಭಾವಿ ಸಭೆಯನ್ನು ನಡೆಸದೇ ಜಿಲ್ಲಾಡಳಿತ ಅಗೌರ ತೋರಿದೆ ಎಂದು ಸಮಾಜದ ಮುಖಂಡ ಶ್ರೀನಿವಾಸ ಹುಬ್ಬಳ್ಳಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾಧಿಕಾರಿ ಕರೆದ ಪೂರ್ವಭಾವಿ ಸಭೆಗೆ ಹಾಜರಾಗಲು ಮಾ.26 ರಂದು ಜಿಲ್ಲಾಡಳಿತಕ್ಕೆ ತೆರಳಿದ್ದೇವು. ಜಿಲ್ಲಾಡಳಿತ ಆಹ್ವಾನದಂತೆ ನೇಕಾರ ಸಮಾಜದ ಗಣ್ಯರು, ಮುಖಂಡರು ಸರಿಯಾದ ಸಮಾಯಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಾಜರಿದ್ದೇವು. ಆದರೆ, ಸಮಯಕ್ಕೆ ಸರಿಯಾಗಿ ಹಾಜರಿದ್ದ ಸಮಾಜದ ಗಣ್ಯರು, ಮುಖಂಡರನ್ನು ಪರಿಗಣಿಸದೇ ಸಂಜೆ 7.30 ಆದರೂ ಸಭೆ ನಡೆಯಸಲಿಲ್ಲ. ಜಿಲ್ಲಾಡಳಿತದ ಈ ನಿರ್ಲಕ್ಷ$್ಯ ಧೋರಣೆಯನ್ನು ಬೇಸತ್ತು ಸಮಾಜದ ಗಣ್ಯರು ಹೊರನಡೆದರು. ವಚನಕಾರ ದೇವರ ದಾಸಿಮಯ್ಯನವರಿಗೂ ಅಗೌರವ ತೋರಿದ್ದನ್ನು ಸಮಾಜದ ಮುಖಂಡರು ತೀವ್ರ ಖಂಡಿಸಿ ಸಭೆಯನ್ನು ಬಹಿಷ್ಕರಿಸಿದರು. ಸಮಾಜದ ಮುಖಂಡರಾದ ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯ ಅನಿಲ ಗಡ್ಡಿ, ದೇವಾಂಗ ಸಮಾಜದ ಅಧ್ಯ ದಶರಥರಾಜ ಕೊಳ್ಳಿ, ರಾವೇಂದ್ರ ಯಳವತ್ತಿ, ಮೈಲಾರಪ್ಪ ಅರಣಿ, ಮೋಹನ ಹೊನ್ನಳ್ಳಿ, ಚಿನ್ನಪ್ಪ ನೆಗಳೂರ, ಪ್ರಭು ನೀಲಗುಂದ, ಈರಣ್ಣ ಹುಳ್ಳಿ, ರಮೇಶ ಹತ್ತಿಕಾಳ, ರಾಮಕೃಷ್ಣ ಪಾಂಡ್ರೆ, ಬಸವರಾಜ ಗುಂಡಗಿ, ದೊಡ್ಡಪ್ಪ ಮೂಲಿಮನಿ, ವಿ. ಎನ್​. ಕೋಟಿ, ಮುತ್ತು ಕೊಪ್ಪರದ, ಕಾಶೀನಾಥ ಹೊಸಮನಿ ಸೇರಿದಂತೆ ನೇಕಾರ ಸಮಾಜದ ಹಿರಿಯರು ಸಭೆಯನ್ನು ಬಹಿಷ್ಕರಿಸಿದ್ದೇವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net