ಅವೈಜ್ಞಾನಿಕ ಹಂಪ್ಸ್​ ತೆರವುಗೊಳಿಸಿ, ಡಿಸಿ ನಲಿನ್​ ಅತುಲ್​ ಸೂಚನೆ

DC meet in koppal Naleen Athul road safety committee
ಕೊಪ್ಪಳದಲ್ಲಿ ಡಿಸಿ ನಲಿನ್​ ಅತುಲ್​ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು. ಎಸ್ಪಿ ರಾಮ್​ ಅರಸಿದ್ದಿ, ಎಎಸ್ಪಿ ಹೇಮಂತ್​ ಕುಮಾರ್​, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​, ಪಿಡಬ್ಲೂಡಿ ಇಇ ಹೇಮಂತರಾಜು, ಆರ್​ಟಿಒ ಲಕ್ಷಿ$್ಮನಾರಾಯಣ ನಾಲವಾರ ಇದ್ದರು.
Published on

ಕೊಪ್ಪಳ: ಜಿಲ್ಲೆಯ ವಿವಿಧ ರಸ್ತೆಗಳಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಹಂಪ್ಸ್​ ತೆರವುಗೊಳಿಸಿ. ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ನಗರ, ಗ್ರಾಮೀಣ ಭಾಗದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವೇಗ ತಡೆಗೆ ಹಂಪ್ಸ್​ ಹಾಕಲಾಗಿದೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತದೆ. ಅಪಘಾತ ಸಂಭವಿಸುವ ಸಾಧ್ಯತೆಯೂ ಅಧಿಕ. ಅವೈಜ್ಞಾನಿಕ ರಸ್ತೆ ಉಬ್ಬು ತೆರವು ಮಾಡಿ. ವೇಗ ತಡೆಗೆ ಪರ್ಯಾಯವಾಗಿ ಬ್ಯಾರಿಕೇಡ್​ ಸೇರಿ ಇತರ ತಂತ್ರ ಬಳಸಿ. ರಸ್ತೆ ವಿನ್ಯಾಸಕ್ಕೆ ತಕ್ಕಂತೆ ಶಿಾರಸ್ಸಾದ ಉಬ್ಬುಗಳನ್ನು ನಿರ್ಮಿಸಿ. ಪ್ರಮುಖ ಅಪಘಾತ ವಲಯ ಗುರುತಿಸಿ. ಮುಂಜಾಗ್ರತಾ ಕ್ರಮ ಕೈಗೊಳ್ಳಿ. ನಗರದ ಒಳಗೆ ಲಾರಿ ಸೇರಿ ಭಾರಿ ವಾಹನಗಳ ಓಡಾಟಕ್ಕೆ ಸಮಯ ನಿಗದಿಪಡಿಸಿ. ಅನಗತ್ಯ ಸಂಚಾರ ತಪ್ಪಿಸಿ. ಕೊಪ್ಪಳ, ಗಂಗಾವತಿ ನಗರದಲ್ಲಿ ಪಾರ್ಕಿಂಗ್​ ಸಮಸ್ಯೆ ಹೆಚ್ಚಿದೆ. ನಗರಾಡಳಿತ, ಪೊಲೀಸ್​ ಇಲಾಖೆ ಸಮನ್ವಯದೊಂದಿಗೆ ಪರಿಹಾರ ಕಂಡುಕೊಳ್ಳಲು ಸೂಚಿಸಿದರು.

ಬೀದಿ ವ್ಯಾಪಾರಿಗಳಿಗೆ ರ್ನಿದಿಷ್ಟ ಸ್ಥಳ ಸೂಚಿಸಿ. ಅವರೊಂದಿಗೆ ಸಭೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಪ್ರವೃತ್ತರಾಗಿ. ರಸ್ತೆ ಸಂಚಾರ ನಿಯಮಗಳ ಬಗ್ಗೆ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ. ಶಾಲಾ&ಕಾಲೇಜು ವಾಹನಗಳಿಗೆ ಜಿಪಿಎಸ್​ ಅಳವಡಿಕೆ ಕಡ್ಡಾಯ. ಈ ಬಗ್ಗೆ ಸಂಬಂಧಿಸಿದ ಸಂಸ್ಥೆಗಳಿಗೆ ಸೂಚಿಸಿ. ಅಪ್ರಾಪ್ತರು ವಾಹನ ಚಲಾಯಿಸಿದಲ್ಲಿ ಪಾಕರಿಗೆ ತಿಳಿವಳಿಕೆ ನೀಡಿ. ವಾಹನ ಚಲಾಯಿಸಿದಲ್ಲಿ ದಂಡ ವಿಧಿಸಿ. ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್​, ನಾಲ್ಕು ಚಕ್ರ ವಾಹನ ಸವಾರರಿಗೆ ಸೀಟ್​ ಬೆಲ್ಟ್​ ಕಡ್ಡಾಯಗೊಳಿಸಿ. ಅತಿ ವೇಗ, ಕರ್ಕಶ ಶಬ್ದ ಉಂಟುಮಾಡುವ ವಾಹನಗಳನ್ನು ವಶಕ್ಕೆ ಪಡೆದು ಶಿಸ್ತುಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

ಎಸ್ಪಿ ಡಾ.ರಾಮ್​ ಎಲ್​. ಅರಸಿದ್ದಿ ಮಾತನಾಡಿ, ನಗರ ಪ್ರದೇಶಗಳಲ್ಲಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್​ ಹಾಗೂ ಕಾರು ಚಾಲಕರಿಗೆ ಸೀಟ್​ ಬೆಲ್ಟ್​ ಕಡ್ಡಾಯಗೊಳಿಸಿದ್ದೇವೆ. ಚಾಲನಾ ಪರವಾನಗಿ ಪರಿಶೀಲಿಸಿ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಲಾಗುತ್ತಿದೆ. ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್​ ವ್ಯವಸ್ಥೆ ಸುಗಮಗೊಳಿಸಲಾಗುವುದು ಎಂದರು.

ಎಎಸ್ಪಿ ಹೇಮಂತ್​ ಕುಮಾರ್​, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​, ಪಿಡಬ್ಲೂಡಿ ಇಇ ಹೇಮಂತರಾಜು, ಆರ್​ಟಿಒ ಲಕ್ಷಿ$್ಮನಾರಾಯಣ ನಾಲವಾರ ಇತರ ಅಧಿಕಾರಿಗಳಿದ್ದರು.

ಟೋಲ್​ಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಎನ್​ಎಚ್​ಗಳಲ್ಲಿ ವೇಗ ಮಿತಿ ತಿಳಿವ ಸಾಧನ ಅಳವಡಿಸಿ. ನಗರ ಪ್ರದೇಶದಲ್ಲಿ ಸಂಚಾರಕ್ಕೆ ತೊಂದರೆ ಆಗುವ ುಟ್​ಾತ್​ ತೆರವುಗೊಳಿಸಿ. ಬಿಡಾಡಿ ದನಗಳನ್ನು ಸ್ಥಳಾಂತರಿಸಿ. ರಸ್ತೆ ತಿರುವು, ಸಂಪರ್ಕ ರಸ್ತೆಗಳಲ್ಲಿ ಸೂಚನಾ ಲಕ ಅಳವಡಿಸಿ. ನಲಿನ್​ ಅತುಲ್​. ಕೊಪ್ಪಳ ಡಿಸಿ.

ನಲಿನ್​ ಅತುಲ್​. ಕೊಪ್ಪಳ ಡಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net