

ರೋಣ: ಪಟ್ಟಣದ ತಾಲೂಕು ಕಚೇರಿಗೆ ಗುರುವಾರ ಜಿಲ್ಲಾಧಿಕಾರಿ ಶ್ರೀಧರ ದಿಢೀರ್ ಭೇಟಿ ನೀಡಿದರು. ಟಪಾಲು ವಿಭಾಗಕ್ಕೆ ಭೇಟಿ ನೀಡಿದ ಅವರು, ಸಾರ್ವಜನಿಕರ ಅರ್ಜಿಗಳನ್ನು ಸಮರ್ಪಕವಾಗಿ ಕಂಪ್ಯೂಟರೀಕರಣ ಮಾಡುವಂತೆ ಸೂಚಿಸಿದರು. ದಾಖಲೆಗಳ ಗಣಕೀಕರಣ ವಿಭಾಗಕ್ಕೆ ತೆರಳಿ ಪರಿಶೀಲನೆ ನಡೆಸಿ, ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದರು. ತಾಲೂಕು ಕಚೇರಿ ದುರಸ್ತಿ ಕೆಲಸ ವೀಕ್ಷಿಸಿ ತಹಸೀಲ್ದಾರ್ ನಾಗರಾಜ ಕೆ. ಅವರಿಗೆ ಕೆಲವು ಸಲಹೆ ಸೂಚನೆ ನೀಡಿದರು. ತಾಲೂಕು ಕಚೇರಿಯಲ್ಲಿದ್ದ ಸಾರ್ವಜನಿಕರಿಂದ ದೂರು ಆಲಿಸಿದ ಅವರು ಕುಂದು-ಕೊರತೆ ಅರ್ಜಿಗಳನ್ನು ಸ್ವೀಕರಿಸಿ ನಿಯಮಾನುಸಾರ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಯಾವುದೇ ಕಾರಣಕ್ಕೂ ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬಾರದು ಎಂದು ಹೇಳಿದರು. ತಹಸೀಲ್ದಾರ್ ನಾಗರಾಜ ಕೆ., ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಉಪ ತಹಸೀಲ್ದಾರ್ ಜೆ.ಟಿ. ಕೊಪ್ಪದ, ರೇಣುಕಾ ನೀಲುಗಲ್ಲ, ಎಲ್.ಎಸ್. ದಾಸಪ್ಪನವರ, ಸಂಗಮೇಶ ಮಡಿವಾಳರ, ಇತರರಿದ್ದರು.