ವಿಳಂಭಿಸದೆ ಫಾರಂ ಹಿಂದಿರುಗಿಸಿ ಮತದಾರರಿಗೆ ಜಿಲ್ಲಾಧಿಕಾರಿ ಸೂಚನೆ

 ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.
Published on
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 18,03,766 ಮತದಾರರ ಪೈಕಿ 17,86,112 ಅಂದರೆ ಶೇ.99.02 ಮತದಾರರಿಗೆ ಎನ್ಯುಮರೇಶನ್ ಫಾರಂಗಳನ್ನು ತಲುಪಿಸಲಾಗಿದೆ.
ಜು.29 ಎನ್ಯುಮರೇಶನ್ ಫಾರಂಗಳ ಡಿಜಿಟೈಸೇಶನ್‌ಗೆ ಕೊನೆಯ ದಿನವಾಗಿರುವುದರಿಂದ ಮತದಾರರು ಆದಷ್ಟು ಬೇಗ ಎನ್ಯುಮರೇಶನ್ ಫಾರಂಗಳನ್ನು ಭರ್ತಿ ಮಾಡಿ ಬಿ.ಎಲ್.ಒ ಅವರು ಮನೆಗೆ ಬಂದಾಗ ವಿಳಂಬ ಮಾಡದೇ ನೀಡಬೇಕು.
ಬಿ.ಎಲ್.ಒ ಅವರು ಮತದಾರರಿಂದ ಸ್ವೀಕೃತವಾಗುವ ಎನ್ಯುಮರೇಶನ್ ಫಾರಂಗಳನ್ನು ಬಿ.ಎಲ್.ಒ ಆ್ಯಪ್ ನಲ್ಲಿ ಡಿಜಿಟೈಸೇಶನ್ ಮಾಡಲು ಕನಿಷ್ಠ 2 ರಿಂದ 4 ನಿಮಿಷಗಳ ಸಮಯ ತಗಲುತ್ತದೆ. ಕೊನೆಯ ಹಂತದಲ್ಲಿ ಅಂದರೆ ಜು.25 ರ ನಂತರ ಹೆಚ್ಚಿನ ಎನ್ಯುಮರೇಶನ್ ಫಾರಂಗಳು ಸ್ವೀಕೃತವಾದರೆ ಡಿಜಿಟೈಸೇಶನ್ ಮಾಡುವುದು ಕಷ್ಟವಾಗಬಹುದು.
ಜಿಲ್ಲೆಯಲ್ಲಿ ಇದುವರೆಗೆ ಶೇ.19.92ರಷ್ಟು ಮತದಾರರ ಎನ್ಯುಮರೇಶನ್ ಫಾರಂಗಳನ್ನು ಡಿಜಿಟೈಸ್ ಮಾಡಲಾಗಿರುತ್ತದೆ. ಡಿಜಿಟೈಸೇಶನ್ ಮಾಡಿದ ಎನ್ಯುಮರೇಶನ್ ಫಾರಂಗಳಲ್ಲಿರುವ ಮತದಾರರು ಮಾತ್ರ ಆ.5 ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿರುತ್ತಾರೆ. ಆದುದರಿಂದ ಜಿಲ್ಲೆಯ ಎಲ್ಲಾ ಮತದಾರರು ಈ ಒಂದು ವಾರದಲ್ಲಿ ಎನ್ಯುಮರೇಶನ್ ಫಾರಂಗಳನ್ನು ಭರ್ತಿ ಮಾಡಿ ಬಿ.ಎಲ್.ಒ ರವರಿಗೆ ನೀಡಿ ಸಹಕರಿಸಲು ಜಿಲ್ಲಾ ಚುನಾವಣಾಧಿಕಾರಿ ದರ್ಶನ್ ಎಚ್.ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
3.80 ಲಕ್ಷ ಫಾರಂ ಡಿಜಿಟೈಸ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಜುಲೈ 14 ರವರೆಗೆ 17,86,883 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 3,80,568 ಫಾರಂಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ವಿವರ:
ಬೆಳ್ತಂಗಡಿ-45153, ಮೂಡುಬಿದಿರೆ-41229, ಮಂಗಳೂರು ನಗರ ಉತ್ತರ-41055, ಮಂಗಳೂರು ನಗರ ದಕ್ಷಿಣ-49036, ಮಂಗಳೂರು-63549, ಬಂಟ್ವಾಳ-43966, ಪುತ್ತೂರು-38969, ಸುಳ್ಯ-57611.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net