8 ಕೋಟಿ ರೂ. ವೆಚ್ಚದಲ್ಲಿ ಕಟ್ಟಡಗಳ ದುರಸ್ತಿ

IMG-20230529-WA0013.jpg
Published on


ಬೆಳಗಾವಿ:ಜಿಲ್ಲೆಯಲ್ಲಿ ಅತಿವೃಷ್ಟಿ, ನದಿಗಳ ಪ್ರವಾಹದಿಂದ ಹಾನಿಯಾದ  ಸರ್ಕಾರಿ ಕಟ್ಟಡಗಳ ಪೈಕಿ 8 ಕೋಟಿ ರೂ. ವೆಚ್ಚದಲ್ಲಿ  ಅಂಗನವಾಡಿ ಮತ್ತು  ಶಾಲಾ  ಕಟ್ಟಡಗಳನ್ನು  ದುರಸ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಕೊಳ್ಳ ಅವರಿಗೆ ಮಾಹಿತಿ ನೀಡಿ ಮಾತನಾಡಿದ ಅವರು,  ಅಂಗನವಾಡಿ ಕೇಂದ್ರಗಳ ಮಕ್ಕಳ ಹಿತದೃಷ್ಟಿಯಿಂದ ಕಳೆದ ವರ್ಷ ವಿಪತ್ತಿನಿಂದ ಹಾನಿಯಾದ ಕಟ್ಟಡಗಳ ದುರಸ್ತಿ ಕಾರ್ಯಕ್ಕೆ ಬಿಡುಗಡೆಯಾದ ಒಟ್ಟು ಹತ್ತು ಕೋಟಿ ರೂ. ಅನುದಾನದಲ್ಲಿ  4 ಕೋಟಿ ರೂ. ವೆಚ್ಚದಲ್ಲಿ 200 ಅಂಗನವಾಡಿ ಹಾಗೂ 4 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿಗೆ ಒತ್ತು ನೀಡಲಾಗಿದೆ ಎಂದು ವಿವರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ ಎ.ಎಂ., ಮಹಾಂತೇಶ ಭಜಂತ್ರಿ, ಸಚಿನ ಹಿರೇಮಠ, ಮಹೇಶ ಸಂಗಾನಟ್ಟಿ, ಶ್ರೀದೇವಿ ಗುಳ್ಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net