ಜಿಲ್ಲೆಯಲ್ಲಿ 15,41,856 ಅರ್ಹ ಮತದಾರರು: ಮಹಿಳೆಯರೇ ಚುನಾವಣೆಯಲ್ಲಿ ನಿರ್ಣಾಯಕ

DC election meeting mandya
Published on

ಮಂಡ್ಯ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಅರ್ಹ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಡಾ.ಕುಮಾರ ಪ್ರಕಟಿಸಿದ್ದಾರೆ. ಅದರಂತೆ 15,41,856 ಜನರು ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ. ಇನ್ನು ಮಹಿಳಾ ಮತದಾರರೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಡಿಸಿ, 2024 ಜ.1 ಅನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು ನಡೆಸಿದ ವಿಶೇಷ ಪರಿಷ್ಕರಣೆಯಂತೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ 1,822 ಮತಗಟ್ಟೆಗಳಿವೆ. 7,60,248 ಪುರುಷ, 7,81,452 ಮಹಿಳೆಯರು, 156 ತೃತೀಯ ಲಿಂಗಿಗಳು ಸೇರಿದಂತೆ 15,41,856 ಮತದಾರರಿದ್ದಾರೆ. 18 ವರ್ಷ ಮೇಲ್ಪಟ್ಟ ಅರ್ಹ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. 2024 ಜ.22ರ ಅಂತ್ಯಕ್ಕೆ ಸೇರ್ಪಡೆಯಾಗಿರುವ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಾರ್ವಜನಿಕರು ತಪ್ಪದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಪರಿಶೀಲಿಸಿಕೊಳ್ಳಬೇಕು ಎಂದು ಹೇಳಿದರು.

ಮಳವಳ್ಳಿ ತಾಲೂಕಿನಲ್ಲಿ 272 ಮತಗಟ್ಟೆಗಳಿವೆ. 1.,24,922 ಪುರುಷ, 1,25,939 ಮಹಿಳೆಯರು, 25 ತೃತೀಯ ಲಿಂಗಿಗಳು ಸೇರಿ 2,50,886 ಮತದಾರರಿದ್ದಾರೆ. ಮದ್ದೂರು ತಾಲೂಕಲ್ಲಿ 254 ಮತಗಟ್ಟೆಗಳಿದ್ದು, 1,03,170 ಪುರುಷ, 1,09,993 ಮಹಿಳೆ, 24 ತೃತೀಯ ಲಿಂಗಿಗಳು ಸೇರಿದಂತೆ 2,13,187 ಮತದಾರರಿದ್ದಾರೆ. ಮೇಲುಕೋಟೆ ಕ್ಷೇತ್ರದಲ್ಲಿ 264 ಮತಗಟ್ಟೆಗಳಿದ್ದು, 99,402 ಪುರುಷ, 1,01,662 ಮಹಿಳೆಯರು, 7 ತೃತೀಯ ಲಿಂಗಿ ಸೇರಿದಂತೆ 2,01,071 ಮತದಾರರಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ 262 ಮತಗಟ್ಟೆಗಳಿವೆ. 1,10,059 ಪುರುಷ, 1,15,311 ಮಹಿಳೆಯರು, 33 ತೃತೀಯ ಲಿಂಗಿಗಳು ಸೇರಿದಂತೆ 2,25,403 ಮತದಾರರಿದ್ದಾರೆ ಎಂದರು.

ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 249 ಮತಗಟ್ಟೆಗಳಿವೆ. 1,05,136 ಪುರುಷ, 1,10,034 ಮಹಿಳೆಯರು, 45 ತೃತೀಯ ಲಿಂಗಿಗಳು ಸೇರಿದಂತೆ 2,15,215 ಮತದಾರರಿದ್ದಾರೆ. ನಾಗಮಂಗಲ ಕ್ಷೇತ್ರದಲ್ಲಿ 260 ಮತಗಟ್ಟೆಗಳಿದ್ದು, 1,06,965 ಪುರುಷ, 1,07,714 ಮಹಿಳೆಯರು, 11 ತೃತೀಯ ಲಿಂಗಿಗಳು ಸೇರಿದಂತೆ 2,14,690 ಮತದಾರರಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ 261 ಮತಗಟ್ಟೆಗಳಿದ್ದು, 1,10,594 ಪುರುಷ, 1,10,799 ಮಹಿಳೆಯರು, 11 ತೃತೀಯ ಲಿಂಗಿಗಳು ಸೇರಿದಂತೆ 2,21,404 ಮತದಾರರಿದ್ದಾರೆಂದು ವಿವರಿಸಿದರು.

ಇನ್ನು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಯುವ ಮತದಾರರ ಸೇರ್ಪಡೆಗೆ ಹೆಚ್ಚಿನ ನಿಗಾವಹಿಸಲಾಗಿದೆ. ಅದರಂತೆ 1,62,16 ಯುವಕರು, 1,39,58 ಯುವತಿಯರು, 9 ಇತರೆ ಸೇರಿದಂತೆ 30,183 ಯುವ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಜಿಲ್ಲೆಯಲ್ಲಿ 610 ಪುರುಷ, 23 ಮಹಿಳೆಯರು ಸೇರಿದಂತೆ 633 ಸೇವಾ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 20,931 ಅಂಗವಿಕಲ ಮತದಾರರಿದ್ದಾರೆ. ಅಂತೆಯೇ 12,397 ಪುರುಷ ಹಾಗೂ 8,534 ಮಹಿಳಾ ಮತದಾರರಿದ್ದಾರೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಅಂತಿಮ ಮತದಾರರ ಪಟ್ಟಿಯನ್ನು ವೋಟರ್ ಹೆಲ್ಪ್ಲೈನ್ ಆ್ಯಪ್ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್ https://CEO.karnataka.gov.in ನಲ್ಲಿ ಲಭ್ಯವಿದೆ. ಮತದಾರರು ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ರಾಜಕೀಯ ಪಕ್ಷಗಳ ಮುಖಂಡರಾದ ಮಂಜುನಾಥ, ರಮೇಶ್, ದಿನೇಶ್, ಬೊಮ್ಮಯ್ಯ, ನವೀನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net