ಸಂಚಾರ ಮಾರ್ಗ ಬದಲಾಯಿಸಿ ಡಿಸಿ ಆದೇಶ

dc 7
Published on

ಸುಳ್ಯ: ತಾಲೂಕಿನ ಗುತ್ತಿಗಾರು- ಬಳ್ಳಕ್ಕ-ಪಂಜ ಜಿಲ್ಲಾ ಮುಖ್ಯ ರಸ್ತೆಯಲ್ಲಿ 8.40 ಕಿ.ಮೀ.ಗಳಲ್ಲಿ ಜಳಕದ ಹೊಳೆ ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಗುತ್ತಿಗಾರು-ಬಳ್ಳಕ್ಕ-ಪಂಜ ಮಾರ್ಗದಲ್ಲಿ ಸಂಚರಿಸುವ ಭಾರಿ ವಾಹನಗಳು ಪರ್ಯಾಯ ಮಾರ್ಗವಾದ ಗುತ್ತಿಗಾರು-ಕಮಿಲ-ಬಳ್ಪ ಜಿಲ್ಲಾ ಮುಖ್ಯ ರಸ್ತೆಯ 5.40 ಕಿ.ಮೀ.ಮಾರ್ಗವಾಗಿ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಸುಳ್ಯ ತಾಲೂಕಿನ ಪುಳಿಕುಕ್ಕು, ಎಡಮಂಗಲ, ಅಲೆಕ್ಕಾಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ 6.50 ಕಿ.ಮೀ.ಗಳಲ್ಲಿ ಮಾಲೆಂಗೇರಿ ಎಂಬಲ್ಲಿ ಮೋರಿಯ ಮೇಲೆ ವಾಹನ ಸಂಚಾರ ನಿರ್ಬಂಧಿಸಿ ಎಡಮಂಗಲ-ಪುಳಿಕುಕ್ಕು, ಅಲೆಕಾರಿ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗವಾದ ಮಹಾಕಾಳಿ- ಮಾರ್ದುರಡ್ಕ- ಕಲ್ಲೆಂಬಿ- ಪೆಟ್ರೆ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ. ಸುಳ್ಯ ತಾಲೂಕಿನ ಗುತ್ತಿಗಾರು ಕಮಿಲ-ಬಳ್ಪ ಜಿಲ್ಲಾ ಮುಖ್ಯ ರಸ್ತೆಯಲ್ಲಿ 0.55 ಕಿ.ಮೀ.ನಲ್ಲಿ ಚತ್ರಪ್ಪಾಡಿ ಸೇತುವೆಯಲ್ಲಿ ಭಾರಿ ವಾಹನ ಸಂಚಾರ ನಿರ್ಬಂಧಿಸಿ, ಗುತ್ತಿಗಾರು-ಕಮಿಲ-ಬಳ್ಪ ಮಾರ್ಗದಲ್ಲಿ ಸಂಚರಿಸುವ ಭಾರಿ ವಾಹನಗಳು ಪರ್ಯಾಯ ಮಾರ್ಗವಾದ ಜಬಳೆ- ಕುಕ್ಕುಜಡ್ಕ-ಪಾಜಪಳ್ಳ ಮಾರ್ಗವಾಗಿ ನಿಂತಿಕಲ್ಲು ಮೂಲಕ ಸಂಚರಿಸುವಂತೆ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net