ಕರಕುಶಲ ವಸ್ತುಗಳ ಪ್ರದರ್ಶನದಲ್ಲಿ 4 ಸಾವಿರ ರೂ.‌ ಮೌಲ್ಯದ ಸೀರೆ ಖರೀದಿಸಿದ ಡಿಸಿ

IMG20230724111143.jpg
Published on

ಬೆಳಗಾವಿ: ಕೌಶಲ್ಯಾಭಿವೃದ್ಧಿ ಉಧ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಜಿಪಂನ ಸಂಜೀವಿನಿ ಡೇ-ಎನ್‌ಆರ್‌ಎಲ್‌ಎಂ ಯೋಜನೆಯಡಿ ಸೋಮವಾರ ಸುವರ್ಣ ವಿಧಾನಸೌಧದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ನಡೆಸಲಾಯಿತು.
 ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾ.ಪಂ ಚಿಕಾಲಗುಡ ಗ್ರಾಮದ ‘ಶ್ರಮಜೀವಿ ಸಂಜೀವಿನಿ ವನ-ಧನ ವಿಕಾಸ’ ಕೇಂದ್ರದಿಂದ ಕೇಂದ್ರದ ಮಹಿಳಾ ಸದಸ್ಯರು ಬಾಳೆ ನಾರಿನಿಂದ ತಯಾರಿಸಿದ ಸುಮಾರು 30ಕ್ಕೂ ಹೆಚ್ಚು ವಸ್ತುಗಳು ಹಾಗೂ ಕೈಯಿಂದ ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟವಾದವು. ಜಿಪಂ ತ್ರೈಮಾಸಿಕ ಸಭೆಯ ಅಂಗವಾಗಿ ಸೋಮವಾರ ಆಯೋಜಿಸಿದ್ದ ಪ್ರದರ್ಶನ, ಮೇಳವನ್ನು ಸಚಿವ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.
ಈ ವೇಳೆ ಸಚಿವರು ಹಾಗೂ ಇತರ ಅಧಿಕಾರಿಗಳೊಂದಿಗೆ ಮಳಿಗೆ ವೀಕ್ಷಣೆ ಮಾಡಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು 4000 ರೂ. ಮೌಲ್ಯದ ಕೌದಿ ಖರೀದಿಸಿ ಸಂಘಕ್ಕೆ ಪ್ರೋತ್ಸಾಹಿಸಿದರು. ಜಿಪಂ ಸಿಇಒ, ಜಿ.ಪಂ. ಯೋಜನಾ ನಿರ್ದೇಶಕರು ಹಾಗೂ ಶಾಸಕರು ಸ್ವ-ಸಹಾಯ ಗುಂಪುಗಳ ವಸ್ತುಗಳ ಕುರಿತು ಶ್ಲಾಘಿಸಿದರು. ಈ ವೇಳೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಜಿಲ್ಲೆಯಲ್ಲಿ ಸ್ವ-ಸಹಾಯ ಗುಂಪುಗಳಿಂದ ಉತ್ಪಾದಿಸುವ ವಸ್ತುಗಳಿಗೆ ನಿರಂತರವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಅವರಿಗೆ ಸೂಚಿಸಿದರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net