ವಿದ್ಯಾರ್ಥಿಗಳು, ವಿದೇಶಕ್ಕೆ ತೆರಳುವವರಿಗೆ ಲಸಿಕೆ ; ಸಮನ್ವಯ ಸಾಧಿಸಿ ಲಸಿಕಾಕರಣ ಯಶಸ್ವಿಗೊಳಿಸಿ

28TMK_DC_Photo_Caption
Published on

ತುಮಕೂರು : 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ, ಬೆಂಬಲ ಸಿಬ್ಬಂದಿ ಹಾಗೂ ವಿದೇಶಕ್ಕೆ ತೆರಳುವವರಿಗೆ ಕರೊನಾ ಲಸಿಕೆ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ. ಜುಲೈ ಮೊದಲ ವಾರದಿಂದ ಕಾಲೇಜು ಪ್ರಾರಂಭಿಸಲು ಸರ್ಕಾರ ಉದ್ದೇಶಿಸಿದ್ದು, ಅದಕ್ಕೂ ಪೂರ್ವವಾಗಿ ಒಂದು ದಿನ ಲಸಿಕಾ ಅಭಿಯಾನ ಏರ್ಪಡಿಸಿ ಲಸಿಕೆ ನೀಡಲು ಕ್ರಮವಹಿಸಲಾಗಿದೆ.

ಜಿಲ್ಲಾ ವ್ಯಾಪ್ತಿಯ 12+ ಕಾಲೇಜುಗಳ (ಪದವಿ, ಡಿಪ್ಲೋವಾ, ಐಟಿ) ಪಟ್ಟಿಯನ್ನು ಹಾಗೂ ಪ್ರತಿ ಕಾಲೇಜಿನ 18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿ(ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಬೆಂಬಲ ಸಿಬ್ಬಂದಿ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಿಸಿದ)ಗಳ ಸಂಖ್ಯೆಯನ್ನು ಸಂಬಂಧಿಸಿದ ಕಾಲೇಜಿನ ಮುಖ್ಯಸ್ಥರು ಆರೋಗ್ಯ ಇಲಾಖೆಗೆ ಲಸಿಕಾಕರಣದ ಸಿದ್ಧತೆಗೆ ವಾಹಿತಿ ಒದಗಿಸಬೇಕು. ಲಸಿಕಾಕರಣ ಕಾರ್ಯಕ್ಕೆ ಪ್ರತಿ ಕಾಲೇಜಿನ ಮುಖ್ಯಸ್ಥರು ಒಬ್ಬ ಜವಾಬ್ದಾರಿಯುತ ನೋಡಲ್ ಅಧಿಕಾರಿಯನ್ನು ನೇಮಿಸಲು ಕ್ರಮ ಕೈಗೊಂಡು ಸದರಿ ನೋಡಲ್ ಅಧಿಕಾರಿಗಳು ಆರೋಗ್ಯ ಇಲಾಖೆ ಆರ್‌ಸಿಎಚ್ ಅಧಿಕಾರಿಯೊಂದಿಗೆ ಸಮನ್ವಯ ಸಾಧಿಸಿ ಲಸಿಕಾಕರಣ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಸೂಚಿಸಿದ್ದಾರೆ.

ವಿದೇಶಕ್ಕೆ ತೆರಳುವವರಿಗೆ 2ನೇ ಡೋಸ್: ಉದ್ಯೋಗ ಅಥವಾ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವವರು, ಅಂತಾರಾಷ್ಟ್ರೀಯ ಮಟ್ಟದ ಒಲಂಪಿಕ್ಸ್‌ಗಾಗಿ ಟೋಕಿಯೋಗೆ ತೆರಳುವ ಆಟಗಾರರಿಗೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅರ್ಹ ಫಲಾನುಭವಿಗಳಿಗೆ ಕೋವಿಶೀಲ್ಡ್ ಲಸಿಕೆಯ 2ನೇ ಡೋಸ್‌ನ ಲಸಿಕೆ ನೀಡಲು ಅನುಮತಿ ಇದ್ದು, ಲಸಿಕಾ ಕೇಂದ್ರಗಳಲ್ಲಿ ವಾತ್ರ ಲಸಿಕಾಕರಣ ಕಾರ್ಯಾಚರಣೆ ಹಮ್ಮಿಕೊಳ್ಳಬೇಕು. ಸಂಬಂಧಿಸಿದ ಅಧಿಕಾರಿಗಳು ಫಲಾನುಭವಿಗಳಿಂದ ಸಮರ್ಪಕ ದಾಖಲೆಗಳನ್ನು ಪಡೆದು ಪರಿಶೀಲಿಸಿ 84 ದಿನಗಳಿಗೆ ಮೊದಲು ಕೋವಿಶೀಲ್ಡ್ ಲಸಿಕೆಯ 2ನೇ ಡೋಸ್ ಲಸಿಕಾಕರಣಕ್ಕೆ ಕ್ರಮ ಕೈಗೊಳ್ಳಬಹುದು ಎಂದರು.

ಲಸಿಕೆ ಪಡೆಯುವ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ ದೃಢೀಕರಣ ಪತ್ರ ನೀಡಬೇಕು. ಈ ದೃಢೀಕರಣ ಪತ್ರವನ್ನು ಕೋವಿನ್ ಪೋರ್ಟಲ್‌ನಲ್ಲಿ ಎಸ್‌ಒಪಿಯಂತೆ ಅಪ್‌ಲೋಡ್ ವಾಡಬೇಕು. ಮೊದಲನೇ ಡೋಸ್ ಲಸಿಕೆ ಪಡೆಯುವಾಗ ನೋಂದಣಿಗಾಗಿ ಪಾಸ್‌ಪೋರ್ಟ್ ನಂಬರ್‌ನ್ನು ಬಳಸದೆ ಲಸಿಕೆ ಪಡೆದಿದ್ದರೆ ಅಂತಹ ಫಲಾನುಭವಿಗಳಿಗೆ ಕೋವಿಶೀಲ್ಡ್‌ನ 2ನೇ ಡೋಸ್ ಲಸಿಕೆ ನೀಡಲು ಅನುಬಂಧ 5ರಲ್ಲಿ ಲಗತ್ತಿಸಿದ ಲಸಿಕಾ ಪ್ರವಾಣಪತ್ರ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಕೋವಿಶೀಲ್ಡ್ ಲಸಿಕೆಯ 2 ಡೋಸ್‌ಗಳ ಅಂತರವನ್ನು 12ರಿಂದ 16 ವಾರಗಳಿಗೆ (84 ದಿನಗಳು) ಪರಿಷ್ಕರಿಸಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಭಾರತ ಸರ್ಕಾರದ ನಿರ್ದೇಶನದಂತೆ ಸದರಿ ಗುಂಪುಗಳಿಗೆ 28 ದಿನಗಳನ್ನು ಪೂರೈಸಿದ ನಂತರ ಲಸಿಕೆ ನೀಡಲು ತಿಳಿಸಿದ್ದು, ಅದರಂತೆ ಲಸಿಕಾಕರಣ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net