ರಾಷ್ಟ್ರಕಂಡ ಅಪರೂಪದ ರಾಜಕಾರಣಿ ಡಿ.ಬಿ.ಚಂದ್ರೇಗೌಡ

D.26-MDG-3P1
Published on

ಮೂಡಿಗೆರೆ: ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ವಿಧಾನಸಭೆ ಅಧ್ಯಕ್ಷ ದಿವಂಗತ ಡಿ.ಬಿ.ಚಂದ್ರೇಗೌಡ ಅವರ ಸ್ಮಾರಕವನ್ನು ಶನಿವಾರ ಲೋಕಾರ್ಪಣೆ ಮಾಡಲಾಯಿತು.

ಡಿ.ಬಿ.ಚಂದ್ರೇಗೌಡ ಅವರ ಮೊದಲ ವರ್ಷದ ಪುಣ್ಯತಿಥಿ ಅಂಗವಾಗಿ ದಾರದಹಳ್ಳಿ ಗ್ರಾಮದಲ್ಲಿರುವ ಡಿ.ಬಿ.ಚಂದ್ರೇಗೌಡ ಅವರ ಒಡೆತನದ ಕಾಫಿಎಸ್ಟೇಟ್ನಲ್ಲಿರುವ ಸಮಾಧಿ ಸ್ಥಳದಲ್ಲಿ ನಿರ್ಮಿಸಿರುವ ಸ್ಮಾರಕವನ್ನು ಅವರ ಪತ್ನಿ ಪೂರ್ಣ ದೀಪಬೆಳಗಿಸುವ ಮೂಲಕ ಅನಾವರಣಗೊಳಿಸಿದರು. ಹಿರಿಯ ಸಾಹಿತಿ ಹಳೇಕೋಟೆ ರಮೇಶ್ ಮಾತನಾಡಿ, ಡಿ.ಬಿ.ಚಂದ್ರೇಗೌಡ ಅವರು ರಾಜ್ಯ ಮತ್ತು ರಾಷ್ಟ್ರಕಂಡ ಅಪರೂಪದ ರಾಜಕಾರಣಿಯಾಗಿದ್ದರು. ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ಹೀಗೆ 4 ಸದನಗಳಲ್ಲಿ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ, ಸಚಿವರಾಗಿ, ವಿಧಾನಸಭೆ ಅಧ್ಯಕ್ಷರಾಗಿದ್ದ ಅವರ ರಾಜಕೀಯ ಜೀವನ ಪ್ರಾಮಾಣಿಕವಾಗಿತ್ತು. ಆಳವಾದ ಜ್ಞಾನ ಹೊಂದಿದ್ದ ಅವರು ಕುವೆಂಪು ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದರು ಎಂದರು .

ಚಂದ್ರೇಗೌಡರ ಪುತ್ರಿ ಮುಂಬೈ ಹೈಕೊರ್ಟ್ ವಕೀಲೆ ವೀಣಾ ಮಾತನಾಡಿ, ನಮ್ಮ ತಂದೆ ತಮ್ಮ ಆತ್ಮಕಥನದಲ್ಲಿ ಹೇಳಿಕೊಂಡಿರುವಂತೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಕಾಡು ಸಸಿ. ಮಲೆನಾಡು ಎಂದರೆ ಅವರಿಗೆ ವಿಶೇಷ ಆಕರ್ಷಣೆಯಿತ್ತು. ಪಶ್ಚಿಮಘಟ್ಟ ತಪ್ಪಲಿನ ಪರಿಸರ ಅವರ ಬದುಕಿನ ಮೇಲೆ ಅಗಾಧ ಪ್ರಭಾವ ಬೀರಿತ್ತು ಹಾಗಾಗಿ ಅವರ ಸ್ಮಾರಕದಲ್ಲಿ ನಾಡಿನ ಜೀವನದಿಗಳಾದ ಹೇಮಾವತಿ, ತುಂಗಾ,ಭದ್ರ್ರಾ, ಕಾವೇರಿ ಮತ್ತು ನೇತ್ರಾವತಿ ನದಿಗಳಿಂದ ಆಯ್ದ ಶಿಲೆಗನ್ನು ಬಳಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net