

ಚಿಕ್ಕಮಗಳೂರು: ಮಾಜಿ ಸಚಿವ ದಿವಂಗತ ಡಿ.ಬಿ ಚಂದ್ರೇಗೌಡ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕೆಂಬ ಉz್ದೆÃಶದಿಂದ ಸಮಾಜದಲ್ಲಿ ನೊಂದವರಿಗೆ ಅಳಿಲುಸೇವೆ ಸಲ್ಲಿಸುತ್ತಿz್ದÉÃವೆ ಎಂದು ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ತಿಳಿಸಿದರು.
ನಗರದ ಆಶಾಕಿರಣ ಅಂಧಮಕ್ಕಳ ಪಾಠಶಾಲೆ ಹಾಗೂ ಜೀವನಸಂಧ್ಯಾ ವೃದ್ಧಾಶ್ರಮದಲ್ಲಿ ಮಾಜಿ ಸಚಿವ ದಿ. ಡಿ.ಬಿ ಚಂದ್ರೇಗೌಡ ಅವರ ೮೮ನೇ ಜನ್ಮದಿನದ ಅಂಗವಾಗಿ ದೇಣಿಗೆಯನ್ನು ನೀಡಿ ಮಧ್ಯಾಹ್ನದ ಅನ್ನದಾಸೋಹ ಏರ್ಪಡಿಸಿ ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನದಲ್ಲಿ ಬಡವರು ಮತ್ತು ದೀನ ದಲಿತರ ಪರವಾಗಿ ಧ್ವನಿಯಾಗಿದ್ದ ಚಂದ್ರೇಗೌಡರು ಸ್ವಾಭಿಮಾನಿಯಾಗಿದ್ದರು ಎಂದು ಬಣ್ಣಿಸಿದರು.
ಅಂಧಮಕ್ಕಳ ಪಾಠಶಾಲೆಯ ಕಾರ್ಯದರ್ಶಿ ಮಹೇಶ್ ಮಾತನಾಡಿ, ರಾಜಕೀಯ ಜೀವನದಲ್ಲಿ ಒಂದು ಕಪ್ಪುಚುಕ್ಕಿಯೂ ಇಲ್ಲದಂತೆ ಸೇವೆ ಸಲ್ಲಿಸಿದ ಡಿ.ಬಿ ಚಂದ್ರೇಗೌಡರು ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
೧೯೭೭-೭೮ ರಲ್ಲಿ ಇಂದಿರಾಗಾAಧಿ ಅವರಿಗೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡುವ ಮೂಲಕ ಅವರಿಗೆ ರಾಜಕೀಯ ಪುನರ್‌ಜನ್ಮ ನೀಡಿದ್ದರು. ಇಂದಿರಾಗಾAಧಿಯವರು ಗೆದ್ದುಹೋದ ನಂತರ ಪ್ರಧಾನಮಂತ್ರಿಯಾದರು ಎಂದರು.
ಡಿ.ಬಿ ಚಂದ್ರೇಗೌಡರು ಯಾವುದೇ ಪಕ್ಷಕ್ಕೆ ಹೋದರೂ ಸತ್ಯ, ನಿಷ್ಠೆಯಿಂದ ನಡೆದುಕೊಂಡು ಬಂದ ಸ್ವಚ್ಚ ರಾಜಕಾರಣಿಯಾಗಿದ್ದರು. ಅವರು ಸಚಿವರಾಗಿದ್ದಾಗ ಸನ್ಮಾನ ನೀಡಿದ ಸಂದರ್ಭದಲ್ಲಿ ಕೊಟ್ಟ ಹಣವನ್ನು ಆಶಾಕಿರಣ ಅಂಧಮಕ್ಕಳ ಶಾಲೆಗೆ ದೇಣಿಗೆ ನೀಡಿದ ಉದಾರ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದರು.
ರೋಟರಿ ಸಂಸ್ಥೆಯ ಶ್ರೀಕಾಂತ್ ಮಾತನಾಡಿ, ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಆಶಾಕಿರಣ ಅಂಧಮಕ್ಕಳ ಪಾಠಶಾಲೆಗೆ ರೋಟರಿ ಸಂಸ್ಥೆ ಸೇರಿದಂತೆ ಹಲವು ದಾನಿಗಳು ದೇಣಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಆಶಾಕಿರಣ ಶಾಲೆಯ ಉಪಾಧ್ಯಕ್ಷರಾದ ಮೋಹನ್, ಡಿ.ಬಿ.ಚಂದ್ರೇಗೌಡರ ಕುಟುಂಬದವರಾದ ಸುಮಲತಾ, ವಿಜಯ್‌ಕುಮಾರ್, ಪವಿತ್ರ, ವಕೀಲರಾದ ವೀಣಾ ಮತ್ತಿರತರರಿದ್ದರು.