

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಪೂಳೆಮಾಡು ಶ್ರೀ ಈಶ್ವರ ದೇವಸ್ಥಾನದಲ್ಲಿ ಹಗಲು ಪುತ್ತರಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬೊಳ್ಳಿಯಂಗಡ ದಾದು ಪೂವಯ್ಯ ಅವರ ನೇತೃತ್ವದಲ್ಲಿ ಬಿ.ಯು.ಪೂಣಚ್ಚ ಸೇರಿದಂತೆ ಗ್ರಾಮಸ್ಥರ ಸಮ್ಮುಖದಲ್ಲಿ ರೋಹಿಣಿ ನಕ್ಷತ್ರದಲ್ಲಿ ಪುತ್ತರಿಯನ್ನು ಆಚರಿಸಲಾಯಿತು.
ಆಡಳಿತ ಮಂಡಳಿ ಪ್ರಮುಖರು, ಭಕ್ತರು, ಗ್ರಾಮಸ್ಥರು ದೇವಸ್ಥಾನ ಆವರಣದಲ್ಲಿ ಸೇರಿ ಶನಿವಾರ ಬೆಳಗ್ಗೆ 8.30 ಗಂಟೆಗೆ ಕದಿರು ತೆಗೆಯುವ ಮೂಲಕ ಧಾನ್ಯಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬೊಳಿಯಂಗಡ ದಾದು ಪೂವಯ್ಯ, ದೇವಸ್ಥಾನ ತಕ್ಕರಾದ ಮತ್ರಂಡ ಪೂಣಚ್ಚ ಅವರು ಪುತ್ತರಿ ಆಚರಣೆ ಕುರಿತು ಮಾತನಾಡಿದರು.
ನಾಡತಕ್ಕ ಬೈರಂಡ ಯು.ಪೂಣಚ್ಚ, ಉಪಾಧ್ಯಕ್ಷ ಮತ್ರಂಡ ರಾಜಾ, ಕಾರ್ಯದರ್ಶಿ ಮುತ್ತಪ್ಪ, ಚೇಂದಿರ ರಘು ತಿಮ್ಮಯ್ಯ, ದೇವ ತಕ್ಕ, ಊರತಕ್ಕ, ಭಂಡಾರ ತಕ್ಕ ಇತರರಿದ್ದರು.