ಬಲಿ ಕೊಡುವ ಅನಿಷ್ಟ ಪದ್ಧತಿ ನಿಲ್ಲಿಸಿ: ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಮನವಿ

Dayananda Swamiji press conference Mandya
Published on

ಮಂಡ್ಯ: ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಕೊಡುವುದು ಒಂದು ಅನಿಷ್ಟ ಪದ್ಧತಿ. ಮೂಕ ಪ್ರಾಣಿಗಳ ಬಲಿ ನೀಡಿ ದೇವಾಲಯಗಳನ್ನು ಅಪವಿತ್ರ ಮಾಡದೆ ಹೂವು, ಹಣ್ಣು ಪತ್ರೆಗಳಿಂದ ದೇವರನ್ನು ಪೂಜಿಸಿ ಶಾಂತಿಯಿಂದ, ವಿಜೃಂಭಣೆಯಿಂದ ಹಬ್ಬ ಆಚರಿಸುವಂತೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮಿಜಿ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಸಾತನೂರು ಗ್ರಾಮದಲ್ಲಿ ಅ.1 ಮತ್ತು 2ರಂದು ಮಸಣಮ್ಮ ದೇವಿ ಕರಗ ಮಹೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಾಣಿ ಬಲಿ ಕೊಡಬಾರದು. ಹೈಕೋರ್ಟ್ ಹಾಗೂ ರಾಜ್ಯಸರ್ಕಾರದ ಸೂಚನೆಯಂತೆ ಪ್ರಾಣಿ ಬಲಿ ಕೊಡದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮ ವಹಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ದೇವರು ಮತ್ತು ಧರ್ಮದ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿಕೊಡುವುದು ಸರಿಯಲ್ಲ. ಹಾಗಾಗಿ ಪ್ರಾಣಿ ಬಲಿ, ಜೀವ ಹಿಂಸೆ ತ್ಯಜಿಸಿ ಅಹಿಂಸಾತ್ಮಕವಾಗಿ ಪೂಜೆ ಮತ್ತು ಇತರೆ ಧಾರ್ಮಿಕ ಸೇವಾ ಕೈಂಕರ್ಯಗಳನ್ನು ಮಾಡಬೇಕು. ಕಾನೂನಿನ ಪ್ರಕಾರ ಪ್ರಾಣಿ ಬಲಿ ಶಿಕ್ಷಾರ್ಹ ಆಪರಾಧ. ಆದ ಕಾರಣ ಬಲಿಯನ್ನು ತ್ಯಜಿಸಬೇಕು ಎಂದರು.

ಬೆಂಗಳೂರಿನ ಭಾರತಾಂಬೆ ಮಹಾಸಂಸ್ಥಾನ ಮಠದ ಶಿವಯೋಗಿ ಮಹಾಸ್ವಾಮೀಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net