ದಯಾನಂದ ಅಮಾನತು ಆದೇಶ ಹಿಂಪಡೆಯಲಿ

11 SIRWAR 02
ಸಿರವಾರ ಉಪ ತಹಸೀಲ್ದಾರ್ ಸಿದ್ದನಗೌಡ ಅವರಿಗೆ ಕರವೇಯಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಕೆ.ರಾಘವೇಂದ್ರ ಖಾಜನಗೌಡ,ಪದಾಧಿಕಾರಿಗಳಾದ ವೆಂಕಟೇಶ ಶಂಕ್ರಿ, ಕೆ.ಬಸವರಾಜ ಭಜಂತ್ರಿ, ಮುದುಕಪ್ಪ, ನಾಗೇಶ, ಅಂಜಿನಯ್ಯ, ಮುದುಕಪ್ಪ, ನಿಂಗನಗೌಡ, ಅನಿಲ್ ಕುಮಾರ ಇತರರಿದ್ದರು.
Published on

ಸಿರವಾರ: ರಾಜ್ಯ ಸರ್ಕಾರ ನಿರ್ಲಕ್ಷ್ಯ ಹಿನ್ನೆಲೆ ಕಾಲ್ತುಳಿತಕ್ಕೆ 11 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಪೊಲೀಸ್ ಆಯುಕ್ತ ದಯಾನಂದ ಅವರ ಅಮಾನತು ಆದೇಶ ಹಿಂಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ವತಿಯಿಂದ ಉಪ ತಹಸೀಲ್ದಾರ್ ಸಿದ್ದನಗೌಡ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ತಾಲೂಕು ಅಧ್ಯಕ್ಷ ಕೆ.ರಾಘವೇಂದ್ರ ಖಾಜನಗೌಡ ಮಾತನಾಡಿ, ಆರ್‌ಸಿಬಿ ಪ್ರಶಸ್ತಿ ಗೆದ್ದಿದ್ದಕ್ಕೆ ಬೆಂಗಳೂರಿನಲ್ಲಿ ವಿಜಯೋತ್ಸವದ ಆಚರಣೆ ಮಾಡಲು ಯಾವುದೇ ಯೋಜನೆ ರೂಪಿಸದೆ ಏಕಾಏಕಿ ಕಾರ್ಯಕ್ರಮ ಏರ್ಪಡಿಸಿದ್ದರಿಂದ ದುರ್ಘಟನೆ ನಡೆದಿದೆ. ಯಾರೋ ಮಾಡಿದ ತಪ್ಪಿಗೆ ಇನ್ನಾರೋ ಶಿಕ್ಷೆ ಅನುಭವಿಸಬೇಕಾಗಿದೆ. ದಕ್ಷತೆಯಿಂದ ಕೆಲಸ ಮಾಡಿದ ಪ್ರಾಮಾಣಿಕ ಅಧಿಕಾರಿಯನ್ನು ಅಮಾನತು ಮಾಡಿದ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು. ಹಿಂಪಡೆಯದಿದ್ದರೆ ಜಿಲ್ಲಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net