ದಯಾನಂದ ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನ

IMG-20250105-WA0005-1.jpg
Published on

ಹುಬ್ಬಳ್ಳಿ: ತಾಲೂಕಿನ ರೇವಡಿಹಾಳದಲ್ಲಿರುವ ದಯಾನಂದ ವಿದ್ಯಾರಣ್ಯ ಭಾರತಿ ಗುರುಕುಲ ವಸತಿ ಶಾಲೆಯಲ್ಲಿ ಇತ್ತೀಚೆಗೆ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಶಾಲಾ ವಾರ್ಷಿಕೋತ್ಸವ ಸಡಗರದಿಂದ ನಡೆಯಿತು.

ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ತಯಾರಿಸಿದ ನೂರಕ್ಕೂ ಹೆಚ್ಚು ವಿಜ್ಞಾನ ಮಾದರಿಗಳನ್ನು ವೀಣೆ ಮಾಡಿದರು. ಕ್ಷೇತ್ರ ಶಿಣಾಧಿಕಾರಿ ಉಮೇಶ ಬೊಮ್ಮಕ್ಕನವರ ಹಾಗೂ ಇತರ ಗಣ್ಯರು ಪ್ರದರ್ಶನ ವೀಕ್ಷಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ರೂಢಿತ ಸಂಸ್ಕಾರಕ್ಕಿಂತ ತಿಳಿವಳಿಕೆಯ ಸಂಸ್ಕಾರವು ಅತ್ಯಂತ ಅವಶ್ಯಕ. ಇದನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಮನದಟ್ಟು ಮಾಡಿಕೊಳ್ಳಬೇಕು ಎಂದರು.

ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮೈಕ್ರೋಫಿನಿಶ್ ಕಂಪನಿ ಚೇರ್ಮನ್ ತಿಲಕ್ ವಿಕಂಸಿ, ಗೋಪಾಲಕಷ್ಣ ಪ್ರಭು, ಜಿ.ಜಿ. ಮೋಹನ್ ಕೃಷ್ಣ, ಡಾ. ಎಸ್.ಕೆ. ಜೋಶಿ, ಶಾಲಾ ಆಡಳಿತ ಅಧಿಕಾರಿ ರತ್ನಾಕರ ಪೂಜಾರಿ, ಮುಖ್ಯ ಶಿಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳಾದ ಆಕಾಶ ಗಣಿ ಮತ್ತು ವಿನಾಯಕ ಹುಲಕೊಪ್ಪ ನಿರೂಪಿಸಿದರು. ಕಾರ್ತಿಕ ಎಲಗನ್ನವರ ಸ್ವಾಗತಿಸಿದರು. ರಾಘವೇಂದ್ರ ಭಂಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net