ಕಾಫಿ ಉತ್ಪಾದನೆ ಹೆಚ್ಚಿಸಲು ದಿನಾಚರಣೆ ಆಚರಣೆ

02bhr 2
Published on

ಬಾಳೆಹೊನ್ನೂರು: ಕಾಫಿ ಬಗೆಗಿನ ಜನಪ್ರಿಯತೆ ಹೆಚ್ಚಿಸಿ ಕಾಫಿ ಬೆಳೆಗಾರರ ಉತ್ಪಾದನೆ ಮತ್ತು ಮಾರಾಟ ಉತ್ತೇಜಿಸುವ ಸಲುವಾಗಿ ಅಕ್ಟೋಬರ್1ನ್ನು ವಿಶ್ವ ಕಾಫಿ ದಿನವಾಗಿ ಆಚರಿಸಲಾಗುತ್ತಿದೆ ಎಂದು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಜಂಟಿ ನಿರ್ದೇಶಕ ಡಾ.ನಾಗರಾಜ್ ತಿಳಿಸಿದರು.
ಸೀಗೋಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ವಿಶ್ವ ಕಾಫಿ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದ ಅತೀ ಹೆಚ್ಚಿನ ದೇಶಗಳಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, ನಮ್ಮ ದೇಶವು ಆರನೇ ಸ್ಥಾನದಲ್ಲಿದೆ. ವಿಶೇಷ ಉತ್ಪನ್ನಗಳೊಂದಿಗೆ ಇದು ಜನರ ಗಮನ ಸೆಳೆದಿದೆ ಎಂದು ತಿಳಿಸಿದರು.
ವಿಜ್ಞಾನಿ ಡಾ.ಎ.ಪಿ.ರಂಜಿನಿ ಮಾತನಾಡಿ, ಕಾಫಿ ಸೇವನೆಯಿಂದ ಹಲವು ಆರೋಗ್ಯದ ಲಾಭಗಳಿದ್ದು, ಭಾವನಾತ್ಮಕ ಆರೋಗ್ಯ, ತೂಕ ಇಳಿಸುವಿಕೆಗೆ ಸಹಾಯ, ಕಣ್ಣಿನ ದೃಷ್ಟಿಗೆ ಸಂಬಂಧಿಸಿದಂತೆ ಹಲವು ವಿಧಗಳಲ್ಲಿ ಪೂರಕವಾಗಿದೆ ಎಂದರು.
ವಿಜ್ಞಾನಿ ಡಾ.ಹರೀಶ್ ಮಾತನಾಡಿ, ಸ್ವಚ್ಛತಾ ಅಭಿಯಾನ 4.0 ಕಾರ್ಯಕ್ರಮವನ್ನು ಈ ಬಾರಿ ಹಮ್ಮಿಕೊಂಡಿದ್ದು, ಪ್ಲಾಸ್ಟಿಕ್ ನಿಷೇಧ, ಮಣ್ಣಿನ ಮತ್ತು ಜಲಮಾಲಿನ್ಯಗಳಿಗೆ ಕಾರಣಗಳು ಹಾಗೂ ನಿವಾರಿಸುವ ಕ್ರಮಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು ಎಂದರು.
ನವೋದಯ ವಿದ್ಯಾಲಯದ ಪ್ರಾಚಾರ್ಯೆ ರೇಖಾ ಅಶೋಕ್,ಉಪ ಪ್ರಾಚಾರ್ಯ ಶಶಿಕುಮಾರ್, ಉಪನ್ಯಾಸಕರಾದ ಶಿವಮೂರ್ತಿ, ಎ.ಪಿ.ನಾಗರಾಜ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net