

ವಿಜಯಪುರ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ ಆಗಿದ್ದ ಶ್ರೇಷ್ಠ ವೈದ್ಯ ಬಿ.ಸಿ. ರಾಯ್ ಅವರು ವೈದ್ಯಕಿಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಸ್ಮರಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜು. 1 ರಂದು ರಾಷ್ಟ್ರೀಯ ವೈದ್ಯ ದಿನ ಆಚರಿಸಲಾಗುತ್ತಿದೆ ಎಂದು ಶಾಲೆ ಚೇರ್ಮನ್ ಡಾ. ಜಿ.ಟಿ. ಪಾಟೀಲ ಹೇಳಿದರು.
ನಗರದ ಪದ್ಮಾಂಜಲಿ ಶಾಲೆ ಆವರಣದಲ್ಲಿ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವೈದ್ಯಕಿಯ ಕ್ಷೇತ್ರಕ್ಕೆ ಬಿ.ಸಿ. ರಾಯ್ ಅವರ ಕೊಡುಗೆ ಅಪಾರ. ಅವರು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು. ಶಾಲೆಯ ಅನಿಲ ನಾಯಕ, ಅಶ್ವಿನಿ ಬಿರಾದಾರ ಸ್ವಾಗತಿ, ನಿರೂಪಿಸಿದರು.